ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್
ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್

ಬಾಹ್ಯಾಕಾಶದ ಮಿಷನ್ ಗಳಲ್ಲಿ ಹೆಚ್ಚು ಮಹಿಳಾ ಗಗನಯಾತ್ರಿಗಳಿರಬೇಕೆಂಬುದು ನನ್ನ ಇಚ್ಛೆ: ಇಸ್ರೋ ಅಧ್ಯಕ್ಷ

ದೇಶದ ಬಾಹ್ಯಾಕಾಶ ಮಿಷನ್ ಗಳಲ್ಲಿ ಹೆಚ್ಚು ಮಂದಿ ಮಹಿಳೆಯರು ಇರಬೇಕು ಎಂಬುದು ನನ್ನ ಇಚ್ಛೆಗಳ ಪೈಕಿ ಒಂದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ತಿರುವನಂತಪುರಂ: ದೇಶದ ಬಾಹ್ಯಾಕಾಶ ಮಿಷನ್ ಗಳಲ್ಲಿ ಹೆಚ್ಚು ಮಂದಿ ಮಹಿಳೆಯರು ಇರಬೇಕು ಎಂಬುದು ನನ್ನ ಇಚ್ಛೆಗಳ ಪೈಕಿ ಒಂದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
 
ಈ ಇಚ್ಛೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರತಿಯೊಬ್ಬರ ಭಾವೆಗಳನ್ನೂ ಪ್ರತಿಧ್ವನಿಸುತ್ತದೆ ಎಂದು ಸೋಮನಾಥ್ ಹೇಳಿದ್ದಾರೆ.
 
ತಿರುವನಂತಪುರಂ ನಲ್ಲಿನ ಪೌರ್ಣಮಿ ಕಾವು ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೋದ ಗಗನ್ಯಾನ್ ಮಿಷನ್ ನಲ್ಲಿ ಮಹಿಳಾ ಗಗನಯಾತ್ರಿಗಳು ಹೆಚ್ಚಾಗಿ ಇರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಗನಯಾತ್ರಿಗಳನ್ನು ಈಗಾಗಲೇ ಆಯ್ಕೆ ಮಾಡಿ ತರಬೇತಿ ನೀಡಲಾಗಿರುವುದರಿಂದ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವ ಗಗನ್‌ಯಾನ್‌ನ ಉದ್ಘಾಟನಾ ಕಾರ್ಯಾಚರಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಾರ್ಯಸಾಧ್ಯವಲ್ಲ ಎಂದು ಸೋಮನಾಥ್ ಸ್ಪಷ್ಟಪಡಿಸಿದ್ದಾರೆ. ಆದರೆ ಮುಂದಿನ ಗಗನ್ ಯಾನ್ ಮಿಷನ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಹ್ಯಾಕಾಶ ಸಂಸ್ಥೆಯು ಮಹಿಳಾ ಯುದ್ಧವಿಮಾನ ಪರೀಕ್ಷಾ ಪೈಲಟ್‌ಗಳು ಅಥವಾ ಮಹಿಳಾ ವಿಜ್ಞಾನಿಗಳಿಗೆ ತನ್ನ ಬಹು ನಿರೀಕ್ಷಿತ ಮಾನವ ಬಾಹ್ಯಾಕಾಶ ಕಾರ್ಯಕ್ರಮ-ಗಗನ್ಯಾನ್‌ ನಲ್ಲಿ ಆದ್ಯತೆ ನೀಡುತ್ತದೆ ಮತ್ತು ಭವಿಷ್ಯದಲ್ಲಿ ಅವರನ್ನು ಕಳುಹಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಇಸ್ರೋ ಮುಂದಿನ ವರ್ಷ ತನ್ನ ಮಾನವರಹಿತ ಗಗನ್‌ಯಾನ್ ಬಾಹ್ಯಾಕಾಶ ನೌಕೆಗೆ ಹೆಣ್ಣು ಹುಮನಾಯ್ಡ್ - ಮಾನವನನ್ನು ಹೋಲುವ ರೋಬೋಟ್ ಅನ್ನು ಕಳುಹಿಸುತ್ತದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com