ನವೆಂಬರ್ 2 ರವರೆಗೆ ಟೆಲ್ ಅವಿವ್ ಗೆ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ!

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ನಿರಂತರ ಉದ್ವಿಗ್ನತೆಯ ಮಧ್ಯೆ ಏರ್ ಇಂಡಿಯಾ ನವೆಂಬರ್ 2 ರವರೆಗೆ ಟೆಲ್ ಅವೀವ್‌ಗೆ ವಿಮಾನಗಳನ್ನು ರದ್ದುಗೊಳಿಸಿದೆ. 
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ನಿರಂತರ ಉದ್ವಿಗ್ನತೆಯ ಮಧ್ಯೆ ಏರ್ ಇಂಡಿಯಾ ನವೆಂಬರ್ 2 ರವರೆಗೆ ಟೆಲ್ ಅವೀವ್‌ಗೆ ವಿಮಾನಗಳನ್ನು ರದ್ದುಗೊಳಿಸಿದೆ. ಟೆಲ್ ಅವಿವ್ ಗೆ  ನಿಗದಿತ ವಿಮಾನಗಳನ್ನು ನವೆಂಬರ್ 2 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಅಕ್ಟೋಬರ್ 7 ರಿಂದ ಟೆಲ್ ಅವಿವ್‌ಗೆ ಹೋಗುವ, ಬರುವ  ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಲಾಗಿದೆ. ಸಾಮಾನ್ಯವಾಗಿ ಏರ್ ಇಂಡಿಯಾ ವಿಮಾನಗಳು ವಾರದಲ್ಲಿ ಐದು ದಿನ ರಾಷ್ಟ್ರ ರಾಜಧಾನಿಯಿಂದ ಟೆಲ್ ಅವಿವ್ ಗೆ ಕಾರ್ಯಾಚರಣೆ ನಡೆಸುತ್ತವೆ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಇರುತಿತ್ತು. 

ಈ ತಿಂಗಳಲ್ಲಿ ಯುದ್ಧ ಪೀಡಿತವಾಗಿರುವ ಇಸ್ರೇಲ್ ನಿಂದ ಮರಳಲು ಬಯಸುವ ಭಾರತೀಯರನ್ನು ಕರೆತರಲು ಸರ್ಕಾರದ ಆಪರೇಷನ್ ಅಜಯ್ ಅಡಿಯಲ್ಲಿ ರಾಷ್ಟ್ರ ರಾಜಧಾನಿ ಮತ್ತು ಟೆಲ್ ಅವಿವ್ ನಡುವೆ  ಕೆಲವು ಚಾರ್ಟೆಡ್ ವಿಮಾನಗಳನ್ನು ಏರ್ ಲೈನ್ಸ್ ನಿರ್ವಹಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com