ಪ್ರಧಾನಿ ಮೋದಿ ಬಗ್ಗೆ ಎನ್ವಲಪ್ ಹೇಳಿಕೆ: ಚುನಾವಣಾ ಆಯೋಗದಿಂದ ಪ್ರಿಯಾಂಕಾ ಗಾಂಧಿಗೆ ನೊಟೀಸ್

ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯದ ಭೇಟಿಗೆ ಸಂಬಂಧಿಸಿದಂತೆ ಎನ್ವಲಪ್ ಹೇಳಿಕೆ ನೀಡಿದ್ದ ಪ್ರಿಯಾಂಕಾ ವಾಧ್ರಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. 
ಪ್ರಿಯಾಂಕ ವಾಧ್ರ
ಪ್ರಿಯಾಂಕ ವಾಧ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯದ ಭೇಟಿಗೆ ಸಂಬಂಧಿಸಿದಂತೆ ಎನ್ವಲಪ್ ಹೇಳಿಕೆ ನೀಡಿದ್ದ ಪ್ರಿಯಾಂಕಾ ವಾಧ್ರಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. 

ಅ.30 ರೊಳಗೆ ನೊಟೀಸ್ ಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಪ್ರಿಯಾಂಕ ಗಾಂಧಿಗೆ ಸೂಚನೆ ನೀಡಿದೆ. 

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ವೇಳೆ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಉಲ್ಲೇಖಿಸಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ಬಿಜೆಪಿ ಮನವಿ ಮಾಡಿತ್ತು. ಈ ಬೆನ್ನಲ್ಲೇ ಪ್ರಿಯಾಂಕ ವಾಧ್ರಾಗೆ ನೊಟೀಸ್ ಜಾರಿ ಮಾಡಲಾಗಿದೆ. 

ಮೋದಿ ಅವರು ದೇವಸ್ಥಾನದಲ್ಲಿ ದೇಣಿಗೆಯ ಲಕೋಟೆಯನ್ನು ನೀಡಿದ್ದನ್ನು ಟಿವಿಯಲ್ಲಿ ನೋಡಿದಾಗ ಅದರಲ್ಲಿ ಕೇವಲ 21 ರೂಪಾಯಿ ಇದ್ದದ್ದು ಕಂಡುಬಂದಿತು ಎಂಬುದನ್ನು ಸುದ್ದಿಯಿಂದ ತಿಳಿದುಕೊಂಡೆ ಎಂದು ಹೇಳಿದ್ದರು. 

ಇದನ್ನೇ ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಿಯಾಂಕಾ ವಾಧ್ರ, ಸಾರ್ವಜನಿಕರಿಗೆ ಬಿಜೆಪಿ ಕೇವಲ ಲಕೋಟೆಯನ್ನು ತೋರಿಸುತ್ತದೆ. ಆದರೆ ಚುನಾವಣೆ ಬಳಿಕ ಅದರ ಒಳಗೆ ಏನೂ ಇರುವುದಿಲ್ಲ ಎಂದು ಹೇಳಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com