ಭಾರತದಲ್ಲಿ ಗ್ರಹಣ ಗೋಚರ: ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದೇ?

ಭಾರತದಲ್ಲಿ ಚಂದ್ರಗ್ರಹಣ ಗೋಚರವಾಗಿದ್ದು, ಖಗೋಳ ಕೌತುಕವನ್ನು ಅನೇಕ ಆಸಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಚಂದ್ರಗ್ರಹಣ
ಚಂದ್ರಗ್ರಹಣ

ನವದೆಹಲಿ: ಭಾರತದಲ್ಲಿ ಚಂದ್ರಗ್ರಹಣ ಗೋಚರವಾಗಿದ್ದು, ಖಗೋಳ ಕೌತುಕವನ್ನು ಅನೇಕ ಆಸಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
 
ಮಧ್ಯರಾತ್ರಿ 1:06 ಯಿಂದ ಚಂದ್ರಗ್ರಹಣ ಆರಂಭವಾಗಿದ್ದು ಮಧ್ಯರಾತ್ರಿ 2:24 ಗಂಟೆಗೆ ಅಂತ್ಯವಾಗಲಿದೆ. ಚಂದ್ರಗ್ರಹಣದ ವೇಳೆ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಒಟ್ಟು 1 ಗಂಟೆ 19 ನಿಮಿಷಗಳ ಕಾಲ ಚಂದ್ರ ಗ್ರಹಣ ಗೋಚರವಾಗಲಿದೆ.

ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದೇ? 

ಸೂರ್ಯಗ್ರಹಣದ ವೇಳೆ ಅದನ್ನು ಬರಿಗಣ್ಣಿನಿಂದ ನೋಡುವುದು ಅತ್ಯಂತ ಅಪಾಯಕಾರಿ. ಆದರೆ ಚಂದ್ರಗ್ರಹಣ ಆ ರೀತಿಯಲ್ಲ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದಾಗಿದ್ದು, ಇದಕ್ಕೆ ಯಾವುದೇ ಸುರಕ್ಷತೆಯ ಉಪಕರಣಗಳ ಅಗತ್ಯವಿರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com