ಹಬ್ಬ ಹರಿದಿನಗಳ ಸಮಯದಲ್ಲಿ ಸ್ಥಳೀಯ ವಸ್ತುಗಳ ಬಳಕೆ ಮಾಡಿ, MyBharat ವೆಬ್ ಸೈಟ್ ಸದ್ಯದಲ್ಲೇ ಆರಂಭ: ಪಿಎಂ ಮೋದಿ

ಭಾನುವಾರ ತಮ್ಮ ಜನಪ್ರಿಯ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 106ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ತಿಂಗಳ ಖಾದಿ ಮಹೋತ್ಸವ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾನುವಾರ ತಮ್ಮ ಜನಪ್ರಿಯ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 106ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ತಿಂಗಳ ಖಾದಿ ಮಹೋತ್ಸವ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಈ ತಿಂಗಳ ಆರಂಭದಲ್ಲಿ, ಖಾದಿ ದೆಹಲಿಯಲ್ಲಿ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಯಿತು. ಈ ತಿಂಗಳು ನಡೆದ ಖಾದಿ ಮಹೋತ್ಸವವು ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಮುರಿದಿದೆ. ಗಾಂಧಿ ಜಯಂತಿಯಂದು, ಖಾದಿ ದಾಖಲೆಯ ಮಾರಾಟವಾಗಿದೆ ಎಂದು ಹೇಳಿದರು. 

ಹಬ್ಬ ಹರಿದಿನಗಳಲ್ಲಿ ‘ವೋಕಲ್ ಫಾರ್ ಲೋಕಲ್’ ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಬೇಕೆಂದು ಪ್ರಧಾನಿ ಮೋದಿ ಹೇಳಿದರು. ಪ್ರತಿ ಬಾರಿಯಂತೆ, ಈ ಬಾರಿಯೂ, ನಮ್ಮ ಹಬ್ಬಗಳಲ್ಲಿ, ನಮ್ಮ ಆದ್ಯತೆಯು 'ಸ್ಥಳೀಯತೆಗಾಗಿ ಧ್ವನಿ' ಆಗಿರಬೇಕು. ನಾವೆಲ್ಲರೂ ಒಟ್ಟಾಗಿ ಆ ಕನಸನ್ನು ನನಸಾಗಿಸಿಕೊಳ್ಳೋಣ, ನಮ್ಮ ಕನಸು 'ಆತ್ಮನಿರ್ಭರ ಭಾರತ'. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದರು. 

ದೇಶದ ಜನತೆ ಬೆವರು ಸುರಿಸಿ ತಯಾರಿಸಿರುವ ವಸ್ತುಗಳನ್ನು ಮಾತ್ರ ಖರೀದಿಸಿ. ನೀವು ದೇಶದಲ್ಲಿ ಎಲ್ಲೇ ಪ್ರವಾಸಕ್ಕೆ ಹೋದರೂ, ಉಳಿದ ಹಣದಲ್ಲಿ ಅಲ್ಲಿ ಸ್ಥಳೀಯವಾಗಿ ಸಿದ್ಧಪಡಿಸಿರುವ ವಸ್ತುಗಳನ್ನು ಖರೀದಿ ಮಾಡುವುದನ್ನು ರೂಢಿಸಿಕೊಳ್ಳಿ ಎಂದಿದ್ದಾರೆ.

ಕೇವಲ ಹಬ್ಬದ ದಿನಗಳಲ್ಲಿ ಸ್ಥಳೀಯವಾಗಿ ತಯಾರಿಸಿರುವ ದೀಪವನ್ನು ಖರೀದಿ ಮಾಡಿ ಸುಮ್ಮನಾಗುವುದಲ್ಲ, ಸಣ್ಣ ಸಣ್ಣ ಅಂಗಡಿಗಳು ಮಾತ್ರವಲ್ಲ ಇಡೀ ದೇಶವೇ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ಬ ಆಗಿದ್ದು, ದೇಶದಲ್ಲೇ ತಯಾರಿಸಿರುವ ವಸ್ತುಗಳನ್ನು ಖರೀದಿ ಮಾಡುವ ಮೂಲಕ ದೇಶದ ಜನತೆಯ ಬೆವರು, ಯುವಕರ ಪ್ರತಿಭೆಗೆ ಗೌರವ ನೀಡಬೇಕು. ವೋಲಕ್ ಫಾರ್ ಲೋಕಲ್ ಜತೆ, ಆತ್ಮನಿರ್ಭರ ಭಾರತವು ಕೂಡ ಮುಖ್ಯ , ಹಾಗೆಯೇ ಏನೇ ಖರೀದಿ ಮಾಡಿದರೂ ಹಣವನ್ನು ಯುಪಿಐ ಮೂಲಕವೇ ನೀಡಿ ಎಂದು ಸಲಹೆ ನೀಡಿದರು.

ಇಂದು ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದು ಹೇಳಿದರು. ಅನೇಕ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ನಾವು ಆ ಉತ್ಪನ್ನಗಳನ್ನು ಅಳವಡಿಸಿಕೊಂಡರೆ, ಮೇಕ್ ಇನ್ ಇಂಡಿಯಾ ಪ್ರಚಾರ ಪಡೆಯುತ್ತದೆ ಎಂದರು. 

ಸರ್ದಾರ್ ಪಟೇಲ್ ಸ್ಮರಣೆ: ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಆಚರಿಸುವ ಅಕ್ಟೋಬರ್ 31 ರಂದು ಭಾರತದ ಜನರಿಗೆ ವಿಶೇಷ ಮಹತ್ವವಿದೆ. ನಾವು ಭಾರತೀಯರು ಅವರನ್ನು ಅನೇಕ ಕಾರಣಗಳಿಗಾಗಿ ನೆನಪಿಸಿಕೊಳ್ಳುತ್ತಿದ್ದು, ಅವರಿಗೆ ಗೌರವವನ್ನು ಸಲ್ಲಿಸುತ್ತೇವೆ. ದೇಶದ 580ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಸಂಪರ್ಕಿಸುವಲ್ಲಿ ಅವರ ಅನುಪಮ ಪಾತ್ರವೇ ದೊಡ್ಡ ಕಾರಣ ಎಂದು ಹೇಳಿದರು. 

ಇಂದಿರಾ ಗಾಂಧಿ ಪುಣ್ಯತಿಥಿ: ಪ್ರಧಾನಿ ಮೋದಿಯವರು ಅಕ್ಟೋಬರ್ 31 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿ ಕೂಡ ಆಗಿದೆ, ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನೂ ಸಲ್ಲಿಸುತ್ತೇನೆ. ಭಾರತವು ತನ್ನ ಸಂಸ್ಕೃತಿಯನ್ನು ಉಳಿಸುವ ಪ್ರತಿಯೊಂದು ಪ್ರಯತ್ನದ ಬಗ್ಗೆ ಹೆಮ್ಮೆಪಡುತ್ತದೆ, ಇದು ನಮ್ಮ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಮಾತ್ರವಲ್ಲದೆ ದೇಶದ ಹೆಸರು, ದೇಶದ ಗೌರವ, ಎಲ್ಲವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.

MYBharat ಸಂಸ್ಥೆ: ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಯುವಕರಿಗೆ ಅವಕಾಶವನ್ನು ಒದಗಿಸಲು ಮೈ ಭಾರತ್ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು ಎಂದು ಪಿಎಂ ಘೋಷಿಸಿದರು.

ಅಕ್ಟೋಬರ್ 31 ರಂದು ಅತ್ಯಂತ ದೊಡ್ಡ ರಾಷ್ಟ್ರವ್ಯಾಪಿ ಸಂಘಟನೆಯ ಅಡಿಪಾಯವನ್ನು ಹಾಕಲಾಗುತ್ತದೆ. ಅದು ಕೂಡ ಸರ್ದಾರ್ ಸಾಹೇಬ್ ಅವರ ಜನ್ಮದಿನದಂದು. ಈ ಸಂಸ್ಥೆಯ ಹೆಸರು - ಮೈ ಯಂಗ್ ಇಂಡಿಯಾ, ಅಂದರೆ MYBharat. MYBharat ಸಂಸ್ಥೆಯು ಭಾರತದ ಯುವಜನರಿಗೆ ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಅವಕಾಶವನ್ನು ಒದಗಿಸುತ್ತದೆ ಎಂದರು. 

ಅಮೃತ ವಾಟಿಕಾ: ಈಗ ರಾಷ್ಟ್ರ ರಾಜಧಾನಿಯನ್ನು ತಲುಪುತ್ತಿರುವ ಅಮೃತ ಕಲಶ ಯಾತ್ರೆಗಳ ಅರ್ಥವನ್ನೂ ಪ್ರಧಾನಿ ವಿವರಿಸಿದರು. ಇತ್ತೀಚೆಗೆ, ದೇಶದ ಪ್ರತಿ ಹಳ್ಳಿ ಮತ್ತು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲು ನಾನು ಜನತೆಗೆ ಮನವಿ ಮಾಡಿಕೊಂಡಿದ್ದೆ. ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸಿದ ನಂತರ ಅದನ್ನು ಕಲಶದಲ್ಲಿ ಇರಿಸಿ ಕಲಶವನ್ನು ದೆಹಲಿಗೆ ತರಲಾಗುತ್ತಿದೆ. ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ ಈ ಮಣ್ಣು, ಈ ಸಾವಿರಾರು ಅಮೃತ ಕಲಶ ಯಾತ್ರೆಗಳು ಈಗ ದೆಹಲಿಯನ್ನು ತಲುಪುತ್ತಿವೆ. ಇಲ್ಲಿ ದೆಹಲಿಯಲ್ಲಿ, ಆ ಮಣ್ಣನ್ನು ಬೃಹತ್ ಭಾರತ ಕಲಶಕ್ಕೆ ಸುರಿಯಲಾಗುತ್ತಿದೆ. ದೆಹಲಿಯ ಈ ಪವಿತ್ರ ಮಣ್ಣಿನಿಂದ 'ಅಮೃತ ವಾಟಿಕಾ' ನಿರ್ಮಿಸಲಾಗುವುದು, ಎಂದು ತಿಳಿಸಿದರು. 

ನವೆಂಬರ್ 15 ರಂದು ಭಾರತವು ಬುಡಕಟ್ಟು ಹೆಮ್ಮೆಯ ದಿನವನ್ನು ಆಚರಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಈ ವಿಶೇಷ ದಿನವು ಲಾರ್ಡ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವವಾಗಿದೆ. ಭಗವಾನ್ ಬಿರ್ಸಾ ಮುಂಡಾ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಜೀವನದಿಂದ ನಾವು ನಿಜವಾದ ಧೈರ್ಯ ಮತ್ತು ಒಬ್ಬರ ನಿರ್ಣಯದ ಮೇಲೆ ದೃಢವಾಗಿ ನಿಲ್ಲುವುದರ ಅರ್ಥವೇನು ಎಂದು ಕಲಿಯಬಹುದು ಎಂದರು. 

ಗೋವಿಂದ ಗುರೂಜಿ: ಅಕ್ಟೋಬರ್ 30 ಗೋವಿಂದ ಗುರೂಜಿಯವರ ಪುಣ್ಯತಿಥಿ , ಅವರು ಗುಜರಾತ್ ಮತ್ತು ರಾಜಸ್ಥಾನದ ಬುಡಕಟ್ಟು ಮತ್ತು ವಂಚಿತ ಸಮುದಾಯಗಳ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಗೋವಿಂದ ಗುರುಗಳಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.

ಭಾರತದ ಪ್ಯಾರಾ ಕ್ರೀಡಾಪಟುಗಳ ಸಾಧನೆ: ಪ್ಯಾರಾ ಏಷ್ಯನ್ ಗೇಮ್ಸ್ ​ಭಾರತದ ಆಟಗಾರರು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿಯೂ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಈ ದೇಶಗಳಲ್ಲಿ ಭಾರತ 111 ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದು ಎಲ್ಲಾ ಆಟಗಾರರಿಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com