ಮುಂಬೈ: ಪಾಕ್ ವಿರುದ್ಧ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾರತ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಅಪ್ಘಾನಿಸ್ತಾನದ ಆಟಗಾರರ ರಶೀದ್ ಖಾನ್ ಗೆ ಐಸಿಸಿ ರೂ. 50 ಲಕ್ಷ ದಂಡ ವಿಧಿಸಿದ ನಂತರ ಅವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಉದ್ಯಮಿ ರತನ್ ಟಾಟಾ ಪ್ರತಿಜ್ಞೆ ಮಾಡಿದ್ದಾರೆ ಎಂಬಂತಹ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಕುರಿತು ಇಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರತನ್ ಟಾಟಾ, ಯಾವುದೇ ಆಟಗಾರರಿಗೆ ದಂಡ ಅಥವಾ ಬಹುಮಾನದ ಬಗ್ಗೆ ಐಸಿಸಿ ಅಥವಾ ಯಾವುದೇ ಕ್ರಿಕೆಟ್ ಪ್ಯಾಕಲ್ಟಿಗೆ ಯಾವುದೇ ಸಲಹೆಗಳನ್ನು ನೀಡಿಲ್ಲ.
ನನಗೂ ಕ್ರಿಕೆಟ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಬರದ ಹೊರತು ಅಂತಹ ವಾಟ್ಸಾಪ್ ಫಾರ್ವರ್ಡ್‌ಗಳು ಮತ್ತು ವೀಡಿಯೊಗಳನ್ನು ದಯವಿಟ್ಟು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
Advertisement