ಅದಾನಿ ವಿಚಾರದಲ್ಲಿ ಸರ್ಕಾರ ಗೊಂದಲದ ರಾಜಕಾರಣ ಮಾಡುತ್ತಿದೆ: ಆಪಲ್ ಐಫೋನ್ ಹ್ಯಾಕಿಂಗ್ ಸಂದೇಶ ಬಗ್ಗೆ ರಾಹುಲ್ ಗಾಂಧಿ ಆರೋಪ

ಅದಾನಿಯವರ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ತನಿಖಾ ತಂಡಗಳು ಮತ್ತು ಪತ್ತೆಗಾರಿಕೆಯನ್ನು ಕೇಂದ್ರ ಸರ್ಕಾರ ನಿಯೋಜಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ

ನವದೆಹಲಿ: ತಮ್ಮ ಫೋನ್ ನ್ನು ಗುರಿಯಾಗಿಟ್ಟುಕೊಂಡು ಆಪಲ್ ಕಂಪೆನಿ ಎಚ್ಚರಿಕೆ ಸಂದೇಶ ಕಳುಹಿಸಿದೆ ಎಂದು ತಮ್ಮ ಕಚೇರಿಯಲ್ಲಿರುವ ಹಲವು ನೌಕರರು, ಹಲವು ಪಕ್ಷಗಳು ಮತ್ತು ಕೆಲವು ವಿರೋಧ ಪಕ್ಷದ ನಾಯಕರು ತೋರಿಸಿದ್ದಾರೆ. ಅದಾನಿಯವರ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ತನಿಖಾ ತಂಡಗಳು ಮತ್ತು ಪತ್ತೆಗಾರಿಕೆಯನ್ನು ಕೇಂದ್ರ ಸರ್ಕಾರ ನಿಯೋಜಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಅದಾನಿ ವಿಚಾರದಲ್ಲಿ ಸರ್ಕಾರ ಗೊಂದಲದ ರಾಜಕಾರಣ ಮಾಡುತ್ತಿದೆ ಎಂದು ಕೂಡ ಅವರು ಈ ಸಂದರ್ಭದಲ್ಲಿ ಆರೋಪಿಸಿದರು. ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪಲ್ ಫೋನ್ ತಯಾರಕರಿಂದ ಹಲವಾರು ವಿರೋಧ ಪಕ್ಷದ ನಾಯಕರು ಸ್ವೀಕರಿಸಿದ ಎಚ್ಚರಿಕೆಯ ಇ-ಮೇಲ್‌ನ ಪ್ರತಿಯನ್ನು ಪ್ರದರ್ಶಿಸಿದರು. ಈ ದೇಶದ ಪ್ರಾಯೋಜಿತ ದಾಳಿಕೋರರು ರಾಜಿ ಮಾಡಿಕೊಳ್ಳಲು ಫೋನ್ ಗಳನ್ನು ಬಳಸುತ್ತಿದ್ದಾರೆ ಎಂದು ಸಹ ಆರೋಪಿಸಿದರು.

ಪಕ್ಷದ ನಾಯಕರಾದ ಕೆ ಸಿ ವೇಣುಗೋಪಾಲ್, ಪವನ್ ಖೇರಾ, ಸುಪ್ರಿಯಾ ಶ್ರಿನಾಟೆ ಮತ್ತು ಹಲವಾರು ವಿರೋಧ ಪಕ್ಷದ ನಾಯಕರಿಗೆ ಆಪಲ್ ಕಂಪೆನಿಯಿಂದ ಎಚ್ಚರಿಕೆ ಸಂದೇಶ ಬಂದಿದೆ. ನಾವು ಹೆದರುವುದಿಲ್ಲ, ನೀವು ಎಷ್ಟು ಬೇಕಾದರೂ ಫೋನ್ ಟ್ಯಾಪಿಂಗ್ ಮಾಡಬಹುದು, ನಾನು ಹೆದರುವುದಿಲ್ಲ, ನೀವು ನನ್ನ ಫೋನ್ ಬೇಕಾದರೆ ತೆಗೆದುಕೊಳ್ಳಿ, ನಾನು ನಿಮಗೆ ಕೊಡುತ್ತೇನೆ ಎಂದು ಅವರು ಹೇಳಿದರು.

ದೇಶದಲ್ಲಿ ನಂ.1 ಅದಾನಿ, ನಂ.2 ಪ್ರಧಾನಿ ನರೇಂದ್ರ ಮೋದಿ ಮತ್ತು ನಂ.3 ಅಮಿತ್ ಶಾ ಎಂದು ಶ್ರೇಣಿ ಮಾಡಲಾಗಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com