ಬಿಜೆಪಿ ನಾ.ಯಕ ಗಿರಿಜಾ ಶಂಕರ್ ಶರ್ಮಾ
ಬಿಜೆಪಿ ನಾ.ಯಕ ಗಿರಿಜಾ ಶಂಕರ್ ಶರ್ಮಾ

ಮಧ್ಯಪ್ರದೇಶ ಬಿಜೆಪಿಯಲ್ಲಿ ಅಸಮಾಧಾನ: ಐದು ತಿಂಗಳಲ್ಲಿ ನಾಲ್ವರು ನಾಯಕರು ಪಕ್ಷಕ್ಕೆ ಗುಡ್ ಬೈ!

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ, ದಶಕಗಳಿಂದ ಬಿಜೆಪಿಗೆ ನಿಷ್ಠರಾಗಿರುವ ಕುಟುಂಬಗಳು ಕೇಸರಿ ಪಕ್ಷದಿಂದ ನಿರಾಶೆಗೊಂಡಿರುವ ಅಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಾಜಿ ಶಾಸಕ ಗಿರಿಜಾ ಶಂಕರ್ ಶರ್ಮಾ ಶುಕ್ರವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. 

ಭೋಪಾಲ್: ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ, ದಶಕಗಳಿಂದ ಬಿಜೆಪಿಗೆ ನಿಷ್ಠರಾಗಿರುವ ಕುಟುಂಬಗಳು ಕೇಸರಿ ಪಕ್ಷದಿಂದ ನಿರಾಶೆಗೊಂಡಿರುವ ಅಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಾಜಿ ಶಾಸಕ ಗಿರಿಜಾ ಶಂಕರ್ ಶರ್ಮಾ ಶುಕ್ರವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. 

ಕಳೆದ ಐದು ತಿಂಗಳಲ್ಲಿ ಆಡಳಿತಾರೂಢ ಬಿಜೆಪಿ ತೊರೆದಿರುವ ನಾಲ್ಕನೇ ಬಿಜೆಪಿ ನಾಯಕ ಇವರಾಗಿದ್ದಾರೆ.  ನರ್ಮದಾಪುರಂ ಜಿಲ್ಲೆಯ ಪ್ರಬಲ ಬ್ರಾಹ್ಮಣ ಶರ್ಮಾ ಕುಟುಂಬದ ಇಬ್ಬರು ನಾಯಕರು ಸತತ ಏಳು ಬಾರಿ (1990 ರಿಂದ 2018ರ ನಡುವೆ) ಹೊಶಂಗಾಬಾದ್ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಇದು  33 ವರ್ಷಗಳ ಕಾಲ ಕೇಸರಿ ಪಕ್ಷದ ಭದ್ರಕೋಟೆಯಾಗಿದೆ.  ಹಾಲಿ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಡಾ. ಸೀತಾಸರಣ್ ಶರ್ಮಾ ಅವರು ಐದು ಬಾರಿ (1990, 1993, 1998, 2013 ಮತ್ತು 2018) ಗೆದ್ದಿದ್ದಾರೆ. ಅವರಿಗಿಂತ ಮೊದಲು ಅವರ ಅಣ್ಣ ಗಿರಿಜಾ ಶಂಕರ್ ಶರ್ಮಾ 2003 ಮತ್ತು 2008 ರ ನಡುವೆ ಇಲ್ಲಿ ಶಾಸಕರಾಗಿದ್ದರು. 

ಹಿರಿಯ ನಾಯಕರು ಮತ್ತು ದೀರ್ಘಕಾಲದ ಕಾರ್ಯಕರ್ತರನ್ನು ಕಡೆಗಣಿಸಿರುವುದು ಪಕ್ಷ ತೊರೆಯಲು ಪ್ರಮುಖ ಕಾರಣವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ಎಂದು ಗಿರಿಜಾ ಶಂಕರ್ ಭರವಸೆ ನೀಡಿದ್ದಾರೆ. 33 ವರ್ಷಗಳ ನಂತರ ಇದೇ  ಮೊದಲ ಬಾರಿಗೆ ಹೊಶಂಗಾಬಾದ್ ಕ್ಷೇತ್ರದಿಂದ ಸ್ಪರ್ಧಿಸಲು ಶರ್ಮಾ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನಿರಾಕರಿಸುವ ಸಾಧ್ಯತೆಯಿದೆ ಎಂಬ ಗುಸುಗುಸು ಇರುವಾಗಲೇ ಗಿರಿಜಾ ಶಂಕರ್ ಶರ್ಮಾ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ಇತ್ತೀಚಿನ ಸಂಪುಟ ಪುನಾರಚನೆಯಲ್ಲಿ ಕಿರಿಯ ಸಹೋದರ ಮತ್ತು ಮಾಜಿ ಅಸೆಂಬ್ಲಿ ಸ್ಪೀಕರ್ ಡಾ. ಸೀತಾಸರಣ್ ಶರ್ಮಾ ಅವರನ್ನು ಸಚಿವರನ್ನಾಗಿ ಮಾಡದಿದ್ದಕ್ಕಾಗಿ ಕುಟುಂಬ ನಿರಾಶೆಗೊಂಡಿದೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. 

ಇತ್ತೀಚೆಗೆ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ನಾಥ್‌ ಹಾಗೂ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ದಿಗ್ವಿಜಯಸಿಂಗ್‌ ಅವರನ್ನು ಭೇಟಿಯಾಗಿದ್ದನ್ನು ಗಿರಿಜಾ ಶಂಕರ್ ಶರ್ಮಾ ಒಪ್ಪಿಕೊಂಡಿದ್ದು, ಅತ್ಯುತ್ತಮ ವಿರೋಧ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡುತ್ತೇನೆ. ಆದರೆ ಅದು ಕಾಂಗ್ರೆಸ್ ಸೇರುವ ಅಥವಾ ಅದಕ್ಕೆ ಬಾಹ್ಯ ಬೆಂಬಲ ನೀಡುವ  ಮೂಲಕ ಮಾಡಬಹುದೇ ಎಂಬುದನ್ನು ನೋಡಬೇಕಾಗಿದೆ. ಚುನಾವಣೆಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಯಾವ ಪಕ್ಷಕ್ಕೆ ಸೇರಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಪ್ರಮುಖವಾಗಿ, ಜ್ಯೋತಿರಾದಿತ್ಯ ಸಿಂಧಿಯಾ ಆಪ್ತ ಶಿವಪುರಿ ಜಿಲ್ಲೆಯ ಕೋಲಾರಸ್ ಕ್ಷೇತ್ರದ ಬಿಜೆಪಿ ಶಾಸಕ ವೀರೇಂದ್ರ ರಘುವಂಶಿ ಬಿಜೆಪಿ ತೊರೆದ ಕೇವಲ ಒಂದು ದಿನದ ನಂತರ ಹಿರಿಯ ನಾಯಕರಾಗಿದ್ದ ಶರ್ಮಾ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಘುವಂಶಿ ಶನಿವಾರ ಭೋಪಾಲ್‌ನಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

Related Stories

No stories found.

Advertisement

X
Kannada Prabha
www.kannadaprabha.com