'ಒಂದು ರಾಷ್ಟ್ರ, ಒಂದು ಚುನಾವಣೆ' ಸಮಿತಿ ಸೇರಲು ನಿರಾಕರಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ

ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದ್ದು ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸೇರಿದಂತೆ ಎಂಟು ಸದಸ್ಯರು ಸಮಿತಿಯಲ್ಲಿದ್ದಾರೆ.
ಅಧೀರ್ ರಂಜನ್ ಚೌಧರಿ
ಅಧೀರ್ ರಂಜನ್ ಚೌಧರಿ

ನವದೆಹಲಿ: ಒಂದು ದೇಶ, ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದ್ದು ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸೇರಿದಂತೆ ಎಂಟು ಸದಸ್ಯರು ಸಮಿತಿಯಲ್ಲಿದ್ದಾರೆ.

ಆದರೆ ಇದೀಗ ಅಧೀರ್ ರಂಜನ್ ಚೌಧರಿ ಅವರು ತಾವು ಈ ಸಮಿತಿ ಸೇರಲು ನಿರಾಕರಿಸಿದ್ದಾರೆ. ಇದೆಲ್ಲವೂ ದೊಡ್ಡ ವಂಚನೆ ಎಂದು ನಾನು ಭಾವಿಸುತ್ತೇನೆ. ಆ ಸಮಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರಿಸದಿರುವುದು ದೊಡ್ಡ ಅವಮಾನ. ಹೀಗಾಗಿ ತಾವು ಆ ಸಮಿತಿಯಲ್ಲಿ ಇರುವುದಿಲ್ಲ ಎಂದು ಅಮಿತ್ ಶಾಗೆ ಬರೆದ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಮಿತಿಯಲ್ಲಿ ಅಮಿತ್ ಶಾ, ಅಧೀರ್ ರಂಜನ್ ಚೌಧರಿ, ಗುಲಾಂ ನಬಿ ಆಜಾದ್, ಎನ್‌ಕೆ ಸಿಂಗ್, ಸುಭಾಷ್ ಕಶ್ಯಪ್, ಹರೀಶ್ ಸಾಳ್ವೆ ಅವರನ್ನು ಸೇರಿಸಲಾಗಿದೆ. ಈ ಮಹತ್ವದ ಸಮಿತಿಯ ಭಾಗವಾಗಿ ಸಂಜಯ್ ಕೊಠಾರಿಯನ್ನೂ ಮಾಡಲಾಗಿದೆ. ಈಗ ಇವರೆಲ್ಲರೂ ಒಂದೇ ದೇಶ, ಒಂದು ಚುನಾವಣೆ ಪ್ರಕ್ರಿಯೆ ಕುರಿತು ಚಿಂತನ ಮಂಥನ ನಡೆಸಲಿದೆ. ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಅವರ ಕಡೆಯಿಂದ ಚೌಕಟ್ಟನ್ನು ಸಿದ್ಧಪಡಿಸಲಾಗುವುದ್ದು ವಿವಿಧ ಅಂಶಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ.

ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ. ಆ ಅಧಿವೇಶನದಲ್ಲಿ ಸರ್ಕಾರವು ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಸೂದೆಯನ್ನು ಮಂಡಿಸಬಹುದು ಎಂಬ ಊಹಾಪೋಹವಿದೆ. ಇದು ಸಂಭವಿಸಿದಲ್ಲಿ ಅದು ಸ್ವತಃ ಒಂದು ದೊಡ್ಡ ಸುಧಾರಣೆ ಎಂದು ಸಾಬೀತುಪಡಿಸುತ್ತದೆ. ಆದರೆ ಪ್ರತಿಪಕ್ಷಗಳು ಈ ನಡೆಗೆ ಸಂಪೂರ್ಣ ಸಿದ್ಧರಾಗಿರುವಂತೆ ಕಾಣುತ್ತಿಲ್ಲ, ಭಾರತ ಒಕ್ಕೂಟದ ಸಭೆಯಲ್ಲಿ ಖಂಡಿತವಾಗಿಯೂ ಚಿಂತನ-ಮಂಥನ ಅಧಿವೇಶನ ನಡೆದಿದೆ. ಆದರೆ ಅವರು ಅದನ್ನು ವಿರೋಧಿಸಬೇಕೇ ಅಥವಾ ಬೆಂಬಲಿಸಬೇಕೇ ಎಂಬ ಬಗ್ಗೆ ಏನನ್ನೂ ಹೇಳದೆ ತಪ್ಪಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com