ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಒಂದು ರಾಷ್ಟ್ರ, ಒಂದು ಚುನಾವಣೆ': ಪ್ರಜಾಸತ್ತಾತ್ಮಕ ಭಾರತವನ್ನು ಸರ್ವಾಧಿಕಾರದತ್ತ ಬದಲಾಯಿಸಲು ಮೋದಿ ತಂತ್ರ- ಖರ್ಗೆ

ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪರಿಶೀಲನೆಗಾಗಿ ಸಮಿತಿ ರಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಸತ್ತಾತ್ಮಕ ಭಾರತವನ್ನು ನಿಧಾನವಾಗಿ ಸರ್ವಾಧಿಕಾರದತ್ತ ಪರಿವರ್ತಿಸುವುದು ಮೋದಿ ಅವರ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ. 

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪರಿಶೀಲನೆಗಾಗಿ ಸಮಿತಿ ರಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಸತ್ತಾತ್ಮಕ ಭಾರತವನ್ನು ನಿಧಾನವಾಗಿ ಸರ್ವಾಧಿಕಾರದತ್ತ ಪರಿವರ್ತಿಸುವುದು ಮೋದಿ ಅವರ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ. 

'ಒಂದು ರಾಷ್ಟ್ರ ಒಂದು ಚುನಾವಣೆಗೆ' ಸಮಿತಿ ರಚಿಸುವ ಈ ಗಿಮಿಕ್ ಭಾರತದ ಫೆಡರಲ್ ರಚನೆಯನ್ನು ಕಿತ್ತುಹಾಕಲು ಒಂದು ಉಪಾಯವಾಗಿದೆ ಎಂದು  ಎಕ್ಸ್ ನಲ್ಲಿ ಖರ್ಗೆ ಹೇಳಿದ್ದಾರೆ.

ಭಾರತದ ಸಂವಿಧಾನದಲ್ಲಿ ಕನಿಷ್ಠ ಐದು ತಿದ್ದುಪಡಿಗಳ ಅಗತ್ಯವಿದೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ 1951 ರಲ್ಲಿ ಭಾರಿ ಬದಲಾವಣೆ ಮಾಡಲಾಗುತ್ತದೆ. ಚುನಾಯಿತ ಲೋಕಸಭೆ ಮತ್ತು ಶಾಸನ ಸಭೆಗಳ ಅವಧಿ ಮೊಟಕುಗೊಳಿಸಲು ಸಂವಿಧಾನಾತ್ಮಕ ತಿದ್ದುಪಡಿ ಮಾಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಅವುಗಳನ್ನು ಅದೇ ರೀತಿ ಮಾಡಬಹುದು ಎಂದಿದ್ದಾರೆ. 

ಇದೇ ವೇಳೆ ಬಿಜೆಪಿ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಯಾವುದೇ ವ್ಯಕ್ತಿಯ ಬುದ್ಧಿವಂತಿಕೆ ದುರ್ಬಲಗೊಳಿಸದೆ, ಬಹುಶ: ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಅಡ್ಡಿಯಾಗುವುದರ ಕುರಿತು ನಿರ್ಧರಿಸಲು ಪ್ರಸ್ತಾವಿತ ಸಮಿತಿ ಸೂಕ್ತವೇ
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ರಾಜಕೀಯ ಪಕ್ಷಗಳನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಈ ಬೃಹತ್ ಪ್ರಕ್ರಿಯೆ ಕೈಗೊಳ್ಳಬೇಕೇ? ರಾಜ್ಯಗಳು ಮತ್ತು ಅವುಗಳ ಚುನಾಯಿತ ಸರ್ಕಾರಗಳನ್ನು ಸಮಿತಿಗೆ ತರದೆ ಈ ಬೃಹತ್ ಕಾರ್ಯಾಚರಣೆ ನಡೆಯಬೇಕೇ ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ: ಇವಿಎಂಗಳಿಗೆ ತಗುಲುವ ಖರ್ಚು ಎಷ್ಟು ಗೊತ್ತೇ?: ಆಯೋಗದ ಅಂದಾಜು ಹೀಗಿದೆ...
“ಈ ವಿಚಾರವನ್ನು ಹಿಂದೆ ಮೂರು ಸಮಿತಿಗಳು ವ್ಯಾಪಕವಾಗಿ ಪರಿಶೀಲಿಸಿ, ತಿರಸ್ಕರಿಸಿವೆ. ನಾಲ್ಕನೆಯದನ್ನು ಮೊದಲೇ ನಿರ್ಧರಿಸಿದ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆಯೇ ಎಂದು ನೋಡಬೇಕಾಗಿದೆ. ಭಾರತದ ಪ್ರತಿಷ್ಠಿತ ಚುನಾವಣಾ ಆಯೋಗದ ಪ್ರತಿನಿಧಿಯನ್ನು ಸಮಿತಿಯಿಂದ ಹೊರಗಿಡಲಾಗಿದೆ ಎಂಬುದು ನಮ್ಮನ್ನು ಕಂಗೆಡಿಸುತ್ತದೆ. “2014-19ರ (ಲೋಕಸಭೆ 2019 ಸೇರಿದಂತೆ) ಎಲ್ಲಾ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವು ಮಾಡಿದ ವೆಚ್ಚವು ಸುಮಾರು 5,500 ಕೋಟಿ ರೂಪಾಯಿಗಳಷ್ಟಿದೆ, ಇದು ಸರ್ಕಾರದ ಬಜೆಟ್ ವೆಚ್ಚದ ಒಂದು ಭಾಗವಾಗಿದೆ. ಇದು ವೆಚ್ಚವನ್ನು ಉಳಿಸುತ್ತದೆ ಎಂಬುದು ದಡ್ಡತನವಾಗಿದೆ ಎಂದಿದ್ದಾರೆ. 

ಬಿಜೆಪಿಯಲ್ಲಿನ ಅಧಿಕಾರದ ದುರಾಸೆ ಈಗಾಗಲೇ ನಮ್ಮ ರಾಜಕೀಯವನ್ನು ಹಾಳು ಮಾಡಿದೆ ಮತ್ತು ಪಕ್ಷಾಂತರ ವಿರೋಧಿ ಕಾನೂನನ್ನು ಹಲ್ಲಿಲ್ಲದಂತೆ ಮಾಡಿದೆ. ಒಂದು ರಾಷ್ಟ್ರ ಒಂದು ಚುನಾವಣೆಯಂತಹ ಕಠಿಣ ಕ್ರಮಗಳು ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ವಿಕಸನಗೊಂಡ ಸಮಯ-ಪರೀಕ್ಷಿತ ಕಾರ್ಯವಿಧಾನಗಳನ್ನು ಹಾಳುಮಾಡುತ್ತದೆ ಎಂದು ಅವರು ಕಿಡಿಕಾರಿದ್ದಾರೆ. 

1967 ರವರೆಗೆ ಭಾರತವು ಇಷ್ಟು ರಾಜ್ಯಗಳನ್ನು ಹೊಂದಿರಲಿಲ್ಲ ಅಥವಾ ಪಂಚಾಯತ್‌ಗಳಲ್ಲಿ 30.45 ಲಕ್ಷ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರಲಿಲ್ಲ . ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ನಮ್ಮಲ್ಲಿ ಲಕ್ಷಾಂತರ ಚುನಾಯಿತ ಪ್ರತಿನಿಧಿಗಳಿದ್ದಾರೆ ಮತ್ತು ಅವರ ಭವಿಷ್ಯವನ್ನು ಒಂದೇ ಬಾರಿಗೆ ನಿರ್ಧರಿಸಲಾಗುವುದಿಲ್ಲ ಎಂದು ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com