ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊಬೈಲ್ ಟವರ್ ಅಳವಡಿಕೆಯಲ್ಲಿ ಅಕ್ರಮ: ಮೂವರು ಸೇನಾ ಅಧಿಕಾರಿಗಳ ನಿವಾಸದ ಮೇಲೆ ಸಿಬಿಐ ದಾಳಿ

ಕಾನ್ಪುರ ಕಂಟೋನ್ಮೆಂಟ್‌ನಲ್ಲಿ ಏಳು ಮೊಬೈಲ್ ಟವರ್‌ ಸ್ಥಾಪನೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಸಿಬಿಐ, ಬ್ರಿಗೇಡಿಯರ್, ಕರ್ನಲ್ ಮತ್ತು ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಮೂವರು ಹಿರಿಯ ಸೇನಾಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದೆ.
Published on

ಲಖನೌ: ಕಾನ್ಪುರ ಕಂಟೋನ್ಮೆಂಟ್‌ನಲ್ಲಿ ಏಳು ಮೊಬೈಲ್ ಟವರ್‌ ಸ್ಥಾಪನೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಸಿಬಿಐ, ಬ್ರಿಗೇಡಿಯರ್, ಕರ್ನಲ್ ಮತ್ತು ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಮೂವರು ಹಿರಿಯ ಸೇನಾಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದೆ.

2016 ಮತ್ತು 2019ರ ನಡುವೆ ಕಾನ್ಪುರ ಸ್ಟೇಷನ್ ಪ್ರಧಾನ ಕಚೇರಿಯ ಸ್ಟೇಷನ್ ಕಮಾಂಡರ್ ಆಗಿದ್ದ ಬ್ರಿಗೇಡಿಯರ್ ನವೀನ್ ಸಿಂಗ್, ಅವರ ಸಿಬ್ಬಂದಿ ಅಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಆರ್‌ಪಿ ರಾಮ್ ಮತ್ತು ಕರ್ನಲ್ ದುಶ್ಯಂತ್ ಸಿಂಗ್ ಮತ್ತು ಟವರ್‌ಗಳನ್ನು ಸ್ಥಾಪಿಸಿದ ಲಕ್ನೋ ಮೂಲದ ಕಂಪನಿಯಾದ ಇಂಡಸ್ ಟವರ್ಸ್ ಲಿಮಿಟೆಡ್ ಅನ್ನು ಹೆಸರನ್ನು ಸಿಬಿಐ ಪಟ್ಟಿ ಮಾಡಿದೆ.

ಮೂವರು ಅಧಿಕಾರಿಗಳು ಮತ್ತು ಕಂಪನಿಯ ವಿರುದ್ಧ ಐಪಿಸಿ 120 ಬಿ (ಕ್ರಿಮಿನಲ್ ಪಿತೂರಿ), ಐಪಿಸಿ 420 (ಅಪ್ರಾಮಾಣಿಕತೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಅನ್ನು ಸೆಪ್ಟೆಂಬರ್ 1ರಂದು ದಾಖಲಿಸಲಾಗಿದೆ. ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು 2023ರ ಜುಲೈ 25ರಂದು ರಕ್ಷಣಾ ಸಚಿವಾಲಯದಿಂದ ಅನುಮೋದನೆಯನ್ನು ಪಡೆಯಲಾಗಿತ್ತು.

ಮೂಲಗಳ ಪ್ರಕಾರ, ತನಿಖಾ ಸಂಸ್ಥೆಯು ಭಾನುವಾರ ರಾತ್ರಿ ಲಕ್ನೋ ಕ್ಯಾಂಟ್‌ನಲ್ಲಿರುವ ಮೂವರು ಸೇನಾ ಅಧಿಕಾರಿಗಳ ನಿವಾಸಗಳು ಮತ್ತು ಲಕ್ನೋದಲ್ಲಿರುವ ಕಂಪನಿಯ ಕಚೇರಿ ಮೇಲೆ ದಾಳಿ ಮಾಡುವ ಮೂಲಕ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ. ಬ್ರಿಗೇಡಿಯರ್ ನವೀನ್ ಸಿಂಗ್ ಪ್ರಸ್ತುತ ಲಕ್ನೋದಲ್ಲಿ ನಿಯೋಜನೆಗೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಕೂಡ ರಾಜ್ಯ ರಾಜಧಾನಿಯಲ್ಲಿ ನೆಲೆಸಿದ್ದಾರೆ.

ಸಿಬಿಐ ದಾಖಲಿಸಿದ ಎಫ್‌ಐಆರ್‌ನ ಪ್ರಕಾರ, ಕಾನ್ಪುರದಲ್ಲಿ ತನ್ನ ಪೋಸ್ಟಿಂಗ್ ಸಮಯದಲ್ಲಿ, ಬ್ರಿಗೇಡಿಯರ್ ನವೀನ್ ಸಿಂಗ್ ಅವರು ಏಳು ಮೊಬೈಲ್ ಟವರ್‌ಗಳನ್ನು ಅಕ್ರಮವಾಗಿ ಸ್ಥಾಪಿಸುವ ಕೆಲಸವನ್ನು ಲಕ್ನೋದ ಇಂಡಸ್ ಟವರ್ಸ್ ಲಿಮಿಟೆಡ್‌ಗೆ ವಹಿಸಿದ್ದರು ಎಂದು ತನಿಖಾ ಸಂಸ್ಥೆಯು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆದಿತ್ತು. ಟವರ್‌ಗಳನ್ನು ಅಳವಡಿಸುವುದು ಕಂಟೋನ್ಮೆಂಟ್ ಬೋರ್ಡ್‌ನ ಜವಾಬ್ದಾರಿಯಾಗಿದೆ.

ಈ ನಿಟ್ಟಿನಲ್ಲಿ, ರಕ್ಷಣಾ ಸಚಿವಾಲಯವು 2018ರಲ್ಲಿ ಸುತ್ತೋಲೆಯ ಮೂಲಕ ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಬ್ರಿಗೇಡಿಯರ್ ನವೀನ್ ಸಿಂಗ್ ಅವರು ರಕ್ಷಣಾ ಸಚಿವಾಲಯ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂದು ತಿಳಿದುಬಂದಿದೆ. ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಸ್ಥಳವನ್ನು ಗುರುತಿಸಲು ಅವರು ಮಂಡಳಿಯನ್ನು ಸಹ ರಚಿಸಲಿಲ್ಲ.

ಟವರ್ ಸ್ಥಾಪನೆಯಿಂದ ಬಂದ ಬಾಡಿಗೆಯನ್ನು ಸರ್ಕಾರದ ಖಜಾನೆಗೆ ಜಮಾ ಮಾಡಿಲ್ಲ. ಈ ಬಾಡಿಗೆಯನ್ನು ಆರೋಪಿ ಸೇನಾಧಿಕಾರಿಗಳು ಕಬಳಿಸಿದ ಸಾಧ್ಯತೆ ಇದೆ. ಈ ಕಾರಣದಿಂದಾಗಿ, ಸೇನಾ ಅಧಿಕಾರಿಗಳು ಇಂಡಸ್ ಟವರ್ ಲಿಮಿಟೆಡ್ ಅನ್ನು ನಿರ್ಬಂಧಿಸಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು ಮತ್ತು ಕಂಪನಿಯಿಂದ ಅನಪೇಕ್ಷಿತ ಲಾಭಗಳನ್ನು ಪಡೆದರು ಎಂದು ಆತಂಕ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com