G20 ಶೃಂಗಸಭೆ: ಎರಡು ದಿನಗಳ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಸೆಪ್ಟೆಂಬರ್ 9ರ ಶನಿವಾರ ಪ್ರಾರಂಭವಾಗುವ ಎರಡು ದಿನಗಳ ಜಿ20 ಶೃಂಗಸಭೆಯನ್ನು ಆಯೋಜಿಸಲು ಭಾರತ ಸಜ್ಜಾಗಿದೆ. ಈವೆಂಟ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಶ್ವ ನಾಯಕರೊಂದಿಗೆ ಉತ್ಪಾದಕ ಚರ್ಚೆಗಳನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಎದುರು ನೋಡುತ್ತಿದ್ದಾರೆ.
ಜಿ20 ಶೃಂಗಸಭೆ
ಜಿ20 ಶೃಂಗಸಭೆ

ಸೆಪ್ಟೆಂಬರ್ 9ರ ಶನಿವಾರ ಪ್ರಾರಂಭವಾಗುವ ಎರಡು ದಿನಗಳ ಜಿ20 ಶೃಂಗಸಭೆಯನ್ನು ಆಯೋಜಿಸಲು ಭಾರತ ಸಜ್ಜಾಗಿದೆ. ಈವೆಂಟ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಶ್ವ ನಾಯಕರೊಂದಿಗೆ ಉತ್ಪಾದಕ ಚರ್ಚೆಗಳನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಎದುರು ನೋಡುತ್ತಿದ್ದಾರೆ. G20 ಶೃಂಗಸಭೆ 2023-ಮೊದಲ ಬಾರಿಗೆ ಭಾರತವು ಅಂತಹ ಪ್ರಬಲ ವಿಶ್ವ ನಾಯಕರ ಗುಂಪಿಗೆ ಆತಿಥ್ಯ ವಹಿಸುತ್ತಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಅನೇಕ ವಿಶ್ವ ನಾಯಕರ ದೆಹಲಿಗೆ ಆಗಮಿಸಿದ್ದಾರೆ.

ಜಿ 20 ಚರ್ಚೆಗಳ ಜೊತೆಗೆ, ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸಲು ಪ್ರಧಾನಿ ಮೋದಿ ಹಲವಾರು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. 2023ರ G20 ಶೃಂಗಸಭೆಯ ವಿಷಯವು ಸಂಸ್ಕೃತ ನುಡಿಗಟ್ಟು 'ವಸುಧೈವ ಕುಟುಂಬಕಮ್' ನಿಂದ ಬಂದಿದೆ.

G20 ಶೃಂಗಸಭೆ ದಿನ 1: ಸೆಪ್ಟೆಂಬರ್ 9

* 09.30ರಿಂದ 10.30ರವರೆಗೆ ಭಾರತ ಮಂಟಪದ ಶೃಂಗಸಭೆಯ ಸ್ಥಳದಲ್ಲಿ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ.  ಭಾರತ್ ಮಂಟಪದಲ್ಲಿ ಪ್ರಧಾನ ಮಂತ್ರಿ ಜೊತೆ ಸ್ವಾಗತ ಫೋಟೋಶೂಟ್.

* 10.30-1.30ರವರೆಗೆ ಸೆಷನ್ 1: ಶೃಂಗಸಭೆ ಸಭಾಂಗಣದಲ್ಲಿ ಒಂದು ಭೂಮಿ ಕುರಿತು ಸಮಾವೇಶ.

* 1.30-3.00ರವರೆಗೆ ಭಾರತ ಮಂಟಪದಲ್ಲಿ ದ್ವಿಪಕ್ಷೀಯ ಸಭೆಗಳು.

* 3.00-4.45ರವರೆಗೆ ಸೆಷನ್ II: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪದ ಹಂತ 1ರಲ್ಲಿ ಒಂದು ಕುಟುಂಬ ಕುರಿತು ಸಮಾವೇಶ. ನಂತರ ಹೋಟೆಲ್‌ಗಳಿಗೆ ಅಥಿತಿಗಳ ನಿರ್ಗಮನ.

* 7.00-8.00ರವರೆಗೆ ಭೋಜನಕ್ಕೆ ವಿಶ್ವ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ. ಆಗಮನದ ಫೋಟೋ ಶೂಟ್

* 8.00-9.15 ಊಟದ ನಡುವೆ ಸಂಭಾಷಣೆ.

* 9.10-9.45ರವರೆಗೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಲೀಡರ್ಸ್ ಲಾಂಜ್, ಭಾರತ ಮಂಟಪದ ಲೆವೆಲ್ 2 ನಲ್ಲಿ ಸೇರುತ್ತಾರೆ. ನಂತರ ದಕ್ಷಿಣ ಅಥವಾ ಪಶ್ಚಿಮ ಪ್ಲಾಜಾದಿಂದ ಹೋಟೆಲ್‌ಗಳಿಗೆ ನಿರ್ಗಮನ.

G20 ಶೃಂಗಸಭೆ ದಿನ 2: ಸೆಪ್ಟೆಂಬರ್ 10

* 8.15ರಿಂದ 9.00ರವರೆಗೆ ರಾಜ್‌ಘಾಟ್‌ ಗೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರ ಆಗಮನ.
  ರಾಜ್‌ಘಾಟ್‌ನಲ್ಲಿರುವ ನಾಯಕರ ಲಾಂಜ್‌ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುತ್ತಾರೆ.

* 9.00-9.20ರ ನಡುವೆ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ. ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ  ಪ್ರದರ್ಶನ

*9.20ಕ್ಕೆ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ನಾಯಕರ ಲೌಂಜ್‌ಗೆ ತೆರಳುತ್ತಾರೆ. ಅಲ್ಲಿಂದ ಪ್ರತ್ಯೇಕ ಮೋಟರ್‌ಕೇಡ್‌ಗಳಲ್ಲಿ ಭಾರತ ಮಂಟಪಕ್ಕೆ ನಿರ್ಗಮನ.

* 9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.

* 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಮರ ನೆಡುವ ಕಾರ್ಯಕ್ರಮ. 

* 10.30-12.30ರವರೆಗೆ ಸೆಷನ್ III: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ ಕುರಿತು ಸಮಾವೇಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com