ಜಿ-20 ಶೃಂಗಸಭೆ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಬರಮಾಡಿಕೊಂಡ ಶೋಭಾ ಕರಂದ್ಲಾಜೆ!

ರಾಷ್ಟ್ರರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಇಟಿಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇಂದು ದೆಹಲಿಗೆ ಆಗಮಿಸಿದರು.
ಇಟಲಿ ಪ್ರಧಾನಿಯನ್ನು ಬರಮಾಡಿಕೊಂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಇಟಲಿ ಪ್ರಧಾನಿಯನ್ನು ಬರಮಾಡಿಕೊಂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಇಟಿಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇಂದು ದೆಹಲಿಗೆ ಆಗಮಿಸಿದರು.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಭಾರತೀಯ ಸಂಸ್ಕೃತಿ ಬಿಂಬಿತ ನೃತ್ಯ ರೂಪಕದೊಂದಿಗೆ ಮೆಲೋನಿ ಅವರಿಗೆ ಭಾರತಕ್ಕೆ ಸ್ವಾಗತ ಕೋರಲಾಯಿತು.

ಈ ಮಾರ್ಚ್‌ನಲ್ಲಿ, ರೈಸಿನಾ ಡೈಲಾಗ್‌ನ ಎಂಟನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಮೆಲೋನಿ ಭಾರತಕ್ಕೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ವೇಳೆ ಅವರು ನವದೆಹಲಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಉಭಯ ನಾಯಕರು ಭಾರತ-ಇಟಲಿ ಪಾಲುದಾರಿಕೆಯನ್ನು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು.

ಭಾರತ ಮತ್ತು ಇಟಲಿ 2000 ವರ್ಷಗಳಿಂದ ವ್ಯಾಪಾರ ಸಂಬಂಧಗಳನ್ನು ಹೊಂದಿರುವ ಪ್ರಾಚೀನ ನಾಗರಿಕತೆಗಳಾಗಿವೆ. ಭಾರತ ಮತ್ತು ಇಟಲಿ ನಡುವಿನ ರಾಜಕೀಯ ಸಂಬಂಧಗಳು 1947ರಿಂದ ಪ್ರಾರಂಭವಾಗಿವೆ.

ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ಭಾರತವು ಕಳೆದ ವರ್ಷ ಡಿಸೆಂಬರ್ 1 ರಂದು ಜಿ- ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತ್ತು. ಜಿ-2 ಗೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ದೇಶಾದ್ಯಂತ 60 ನಗರಗಳಲ್ಲಿ ಆಯೋಜಿಸಲಾಗಿತ್ತು. ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಶೃಂಗಸಭೆ ನಡೆಯುತ್ತಿರುವುದು ಇದೇ ಮೊದಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com