ಕಳೆದ ಬಾರಿಯ ಹಾಗೂ ಮುಂದಿನ ವರ್ಷದ ಜಿ 20 ಶೃಂಗಸಭೆ ಆಯೋಜಕರಿಂದ ಪ್ರಧಾನಿ ಮೋದಿಗೆ ಸಸಿ ಹಸ್ತಾಂತರ!

ಕಳೆದ ವರ್ಷ ಜಿ 20  ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು.
ಪ್ರಧಾನಿ ಮೋದಿಗೆ ಸಸಿ ನೀಡುತ್ತಿರುವ ಚಿತ್ರ
ಪ್ರಧಾನಿ ಮೋದಿಗೆ ಸಸಿ ನೀಡುತ್ತಿರುವ ಚಿತ್ರ

ನವದೆಹಲಿ: ಕಳೆದ ವರ್ಷ ಜಿ 20  ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-20 ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು. ಜಿ20 ಶೃಂಗಸಭೆಯ ಮೂರನೇ ಅಧಿವೇಶನದ ಆರಂಭದಲ್ಲಿ ಸಾಂಕೇತಿಕ ಸಮಾರಂಭ ನಡೆಯಿತು.

ಮೊದಲು ವಿಡೋಡೋ ಅವರು ಮೋದಿಗೆ ಸಸಿ ಹಸ್ತಾಂತರಿಸಿದರು ಮತ್ತು ನಂತರ ಲುಲಾ ಡ ಸಿಲ್ವಾ ಅವರು ಇತರ ನಾಯಕರ ಚಪ್ಪಾಳೆಗಳ ನಡುವೆ ಪ್ರಧಾನಿಗೆ ಸಸಿಯನ್ನು ನೀಡಿದರು. ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್‌ಗೆ ಹಸ್ತಾಂತರಿಸುವು ದರೊಂದಿಗೆ ಜಿ20 ನಾಯಕರ ಶೃಂಗಸಭೆಯು ಇಂದು ಮಧ್ಯಾಹ್ನ ಮುಕ್ತಾಯಗೊಳ್ಳಲಿದೆ. 

ಜಿ20 ಶೃಂಗಸಭೆಯು ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಮ್ಮತದ ಘೋಷಣೆಯನ್ನು ಅಂಗೀಕರಿಸಿದ ನಂತರ ಭಾರತವು ಶನಿವಾರದಂದು ದೊಡ್ಡ ರಾಜತಾಂತ್ರಿಕ ಗೆಲುವು ಸಾಧಿಸಿದೆ, ಪ್ರಧಾನಿ ಮೋದಿ ಅವರು "ಜಾಗತಿಕ ವಿಶ್ವಾಸದ ಕೊರತೆಯನ್ನು ಕೊನೆಗೊಳಿಸುವಂತೆ ಕರೆ ನೀಡಿದರು. ಆಫ್ರಿಕನ್ ಯೂನಿಯನ್ ನ್ನು ಜಿ 20 ನ ಖಾಯಂ ಸದಸ್ಯರನ್ನಾಗಿ ಸ್ವೀಕರಿಸಲಾಗಿದೆ ಎಂದು ಮೋದಿ ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com