ಕೈಕೊಟ್ಟ ಮುಂಗಾರು: ಆಹಾರ ಪದಾರ್ಥಗಳ ಬೆಲೆ ಇನ್ನಷ್ಟು ಹೆಚ್ಚಳ ಸಾಧ್ಯತೆ 

ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ದೇಶಾದ್ಯಂತ ಹಣದುಬ್ಬರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಮಾಡಿದೆ.
ಆಹಾರ ಪದಾರ್ಥಗಳ ಬೆಲೆ ಇನ್ನಷ್ಟು ಹೆಚ್ಚಳ ಸಾಧ್ಯತೆ
ಆಹಾರ ಪದಾರ್ಥಗಳ ಬೆಲೆ ಇನ್ನಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ದೇಶಾದ್ಯಂತ ಹಣದುಬ್ಬರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಮಾಡಿದೆ.

"ದೇಶಕ್ಕೆ ಒಟ್ಟಾರೆ ಮಳೆಯು ದೀರ್ಘಾವಧಿಯ ಸರಾಸರಿಗಿಂತ 11% ನಷ್ಟು ಕೊರತೆಯ ವಲಯಕ್ಕೆ ಕುಸಿದಿದೆ" ಎಂದು ವರದಿ ಹೇಳಿದೆ. ಎಲ್ ನಿನೊ ವಿದ್ಯಮಾನ ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಯೊಂದಿಗೆ ಸಂಬಂಧಿಸಿದೆ, ಆಗಸ್ಟ್‌ನಲ್ಲಿ ಆಗಾಗ್ಗೆ ವಿರಾಮಗಳೊಂದಿಗೆ ಮಳೆಯ ಅಸಮಾನ ಹಂಚಿಕೆಗೆ ಇದೇ ಕಾರಣವಾಗಿದೆ ಎಂದು ವರದಿ ಹೇಳಿದೆ.

ಅನಿಯಮಿತ ಮಳೆ ಮತ್ತು ವಿವಿಧ ಪ್ರದೇಶಗಳಲ್ಲಿನ ಮಳೆಯ ಹಂಚಿಕೆಯಿಂದಾಗಿ ಖಾರಿಫ್ ಬಿತ್ತನೆಯು ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇದು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞ ಜಾಹ್ನವಿ ಪ್ರಭಾಕರ್ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಈ ನಡುವೆ ಕಳೆದ ವರ್ಷ 212 ಗಿಗಾ ವ್ಯಾಟ್ ಗರಿಷ್ಠ ಬೇಡಿಕೆಗೆ ಹೋಲಿಸಿದರೆ ದೇಶವು 241 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆಯ ದಾಖಲೆಯ ಮಟ್ಟವನ್ನು ತಲುಪಿದೆ. ಕಳೆದ ವರ್ಷ ಸೆಪ್ಟೆಂಬರ್ ಗೆ ಹೋಲಿಕೆ ಮಾಡಿದರೆ, ಖಾರೀಫ್ ಬೆಳೆ ಬಿತ್ತನೆ ಶೇ.0.4 ರಷ್ಟು (1,073.2 ಲಕ್ಷದಿಂದ 1,077.8 ಲಕ್ಷ ಹೆಕ್ಟೇರ್ ಗಳಿಗೆ) ಸುಧಾರಣೆಯಾಗಿದೆ. 

ಆದರೆ ಸಕಾರಾತ್ಮಕ ದೃಷ್ಟಿಯೆಂದರೆ, ಭತ್ತದ ಬೆಳೆ ವಿಸ್ತೀರ್ಣವು ಕಳೆದ ವರ್ಷಕ್ಕಿಂತ 3.7% ರಷ್ಟು ಸುಧಾರಿಸಿದೆ ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಹೇಳಿದೆ. ಬಜ್ರಾ (0.6%) ಮತ್ತು ಮೆಕ್ಕೆಜೋಳದಲ್ಲಿ (2.7%) ಹೆಚ್ಚಿನ ಬಿತ್ತನೆಯಾಗಿದ್ದರೆ, ಕಬ್ಬು ಬೆಳೆ 2022 ರಿಂದ ತೀವ್ರ ಏರಿಕೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com