ಆಧುನಿಕ ಸಮಾಜದಲ್ಲಿ ಮನೆ ಕೆಲಸದ ಹೊರೆಯನ್ನು ಪತಿ-ಪತ್ನಿ ಸಮಾನವಾಗಿ ಹೊರಬೇಕು: ಹೈಕೋರ್ಟ್

ಆಧುನಿಕ ಸಮಾಜದಲ್ಲಿ ಮನೆ ಕೆಲಸದ ಜವಾಬ್ದಾರಿಯನ್ನು ಗಂಡ-ಹೆಂಡತಿ ಸಮಾನವಾಗಿ ಹೊರಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ಮುಂಬೈ: ಆಧುನಿಕ ಸಮಾಜದಲ್ಲಿ ಮನೆ ಕೆಲಸದ ಜವಾಬ್ದಾರಿಯನ್ನು ಗಂಡ-ಹೆಂಡತಿ ಸಮಾನವಾಗಿ ಹೊರಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.

ವಿವಾಹ ವಿಚ್ಛೇದನ ಕೋರಿ 35 ವರ್ಷದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠ, ಪತ್ನಿಯ ವಿರುದ್ಧ `ಕ್ರೌರ್ಯ'ದ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.

ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ 2018 ರಲ್ಲಿ ವಜಾಗೊಳಿಸಿತ್ತು.  ನಂತರ ಕುಟುಂಬ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

2010ರಲ್ಲಿ ಈ ಜೋಡಿ ಮದುವೆಯಾಗಿತ್ತು. ಬಳಿಕ ತನ್ನ ಹೆಂಡತಿ ಯಾವಾಗಲೂ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾಳೆ ಮತ್ತು ಮನೆಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದ್ದರು.

ಆದರೆ ಕಚೇರಿಯಿಂದ ಹಿಂತಿರುಗಿದ ನಂತರ ಮನೆಯ ಎಲ್ಲಾ ಕೆಲಸಗಳನ್ನು ನಾನೇ ಮಾಡುವಂತೆ ಒತ್ತಾಯಿಸುತ್ತಾರೆ ಮತ್ತು ಮಾಡದಿದ್ದರೆ ನಿಂದಿಸುತ್ತಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ವಿಚ್ಛೇದನ ಕೋರಿರುವ ಪತಿ ತನಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಪತ್ನಿ ವಾದಿಸಿದ್ದಾರೆ.

ವಾದ-ಪ್ರತಿ ವಾದ ಆಲಿಸಿದ ಹೈಕೋರ್ಟ್, ತನ್ನ ಆದೇಶದಲ್ಲಿ, ಪುರುಷ ಮತ್ತು ಮಹಿಳೆ ಇಬ್ಬರೂ ಉದ್ಯೋಗದಲ್ಲಿದ್ದಾರೆ. ಹೆಂಡತಿಯು ಮನೆಯ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುವುದು ಹಿಂಜರಿಕೆ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಸಮಾಜದಲ್ಲಿ ಮನೆ ಕೆಲಸದ ಜವಾಬ್ದಾರಿಯನ್ನು ಗಂಡ-ಹೆಂಡತಿ ಸಮಾನವಾಗಿ ಹೊರಬೇಕು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com