ನಿಶಾದ್ ರಾಜ್ ಕೋಟೆಯಿಂದ ಮಸೀದಿ ತೆಗೆಯಿರಿ: ಸಿಎಂ ಯೋಗಿ ಆದಿತ್ಯನಾಥ್ ಗೆ ಮಿತ್ರ ಪಕ್ಷದ ಮನವಿ 

ಪ್ರಯಾಗ್ ರಾಜ್ ನಲ್ಲಿರುವ ನಿಶಾದ್ ರಾಜ್ ಕೋಟೆಯಲ್ಲಿರುವ ಅಕ್ರಮ ಮಸೀದಿಯನ್ನು ತೆರವುಗೊಳಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಗೆ ಬಿಜೆಪಿ ಮಿತ್ರ ಪಕ್ಷ ನಿಶಾದ್ ಪಕ್ಷ ಮನವಿ ಮಾಡಿದೆ. 
ಸಂಜಯ್ ನಿಶಾದ್
ಸಂಜಯ್ ನಿಶಾದ್

ಲಖನೌ: ಪ್ರಯಾಗ್ ರಾಜ್ ನಲ್ಲಿರುವ ನಿಶಾದ್ ರಾಜ್ ಕೋಟೆಯಲ್ಲಿರುವ ಅಕ್ರಮ ಮಸೀದಿಯನ್ನು ತೆರವುಗೊಳಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಗೆ ಬಿಜೆಪಿ ಮಿತ್ರ ಪಕ್ಷ ನಿಶಾದ್ ಪಕ್ಷ ಮನವಿ ಮಾಡಿದೆ. 

ಶೃಂಗ್ವೇರ್ ಪುರ್ ಧಾಮದಲ್ಲಿನ ನಿಶಾದರಾಜ್ ಕೋಟೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ ಎಂದು ಬಿಜೆಪಿ ಮಿತ್ರ ಪಕ್ಷ ಆರೋಪಿಸಿದೆ. ಅಯೋಧ್ಯೆಯಲ್ಲಿ ಮಾಡಿದಂತೆ ಮಸೀದಿಯಿಂದ "ಹಸಿರು ಬಾವುಟ" ತೆಗೆದು ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸುವುದಾಗಿ ಪಕ್ಷ ಹೇಳುತ್ತದೆ.

ಅಯೋಧ್ಯೆಯಲ್ಲಿ ಮಾಡಿದಂತೆ ಮಸೀದಿಯಿಂದ "ಹಸಿರು ಬಾವುಟ" ತೆಗೆದು ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸುವುದಾಗಿ ಪಕ್ಷ ಹೇಳಿದೆ. ಶೃಂಗ್ವೇರ್ ಪುರ ಧಾಮವನ್ನು ನಿಶಾದರು ನಿಶಾದರಾಜನ ಸನ್ನಿಧಿ ಎಂದು ಪರಿಗಣಿಸುತ್ತಾರೆ. ನಿಶಾದರಾಜ, ಭಗವಾನ್ ರಾಮನಿಗೆ 14 ವರ್ಷ ವನವಾಸದ ಆರಂಭದಲ್ಲಿ ಗಂಗಾ ನದಿಯನ್ನು ದಾಟುವುದಕ್ಕೆ ಸಹಾಯ ಮಾಡಿದ್ದ.

ಬಿಜೆಪಿ ಮಿತ್ರ ಪಕ್ಷದ ಬೇಡಿಕೆ ನಿಶಾದ ಸಮುದಾಯದ ಪ್ರಬಲ ಬೇಡಿಕೆಯಾಗುವ ಸಾಧ್ಯತೆ ಇದ್ದು, ಬಹು ನಿರೀಕ್ಷಿತ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

"ನಾನು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸಿದ್ದೇನೆ ಮತ್ತು ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ" ಎಂದು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಹೇಳಿದ್ದಾರೆ.

"ಅಯೋಧ್ಯೆಯ ರಾಮಮಂದಿರದಿಂದ ಹಸಿರು ಧ್ವಜವನ್ನು ಹೇಗೆ ತೆಗೆದುಹಾಕಲಾಯಿತು, ಅದೇ ರೀತಿ ರಾಮನ ಸ್ನೇಹಿತ ನಿಶಾದ ರಾಜನ ಶೃಂಗವೇರಪುರ ಧಾಮದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ, ಅಲ್ಲಿ ಭಗವಾನ್ ರಾಮ ಒಂದು ರಾತ್ರಿ ಕಳೆದಿದ್ದನು" ಎಂದು ಕ್ಯಾಬಿನೆಟ್ ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com