ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ: ನಾಳೆ ಸಿಎಂ ಚೌಹಾಣ್ ಅವರಿಂದ ಅನಾವರಣ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಶಿವನಿಗೆ ಸಮರ್ಪಿತವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಹಿಂದೂ ಸಂತ ಆದಿ ಶಂಕರಾಚಾರ್ಯರ ಭವ್ಯವಾದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಆದಿ ಶಂಕರಾಚಾರ್ಯರ ಸಾಂದರ್ಭಿಕ ಚಿತ್ರ
ಆದಿ ಶಂಕರಾಚಾರ್ಯರ ಸಾಂದರ್ಭಿಕ ಚಿತ್ರ

ಓಂಕಾರೇಶ್ವರ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಶಿವನಿಗೆ ಸಮರ್ಪಿತವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಹಿಂದೂ ಸಂತ ಆದಿ ಶಂಕರಾಚಾರ್ಯರ ಭವ್ಯವಾದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಐತಿಹಾಸಿಕ ಸಂದರ್ಭವಾಗಲಿದೆ.  ಆದಿ ಶಂಕರಾಚಾರ್ಯರು ಇಂದಿನ ಕೇರಳದಲ್ಲಿ ಜನಿಸಿದರೂ, ಕಾಡು, ಪರ್ವತಗಳ ಮೂಲಕ ಪ್ರಯಾಣಿಸಿ ಓಂಕಾರೇಶ್ವರದಲ್ಲಿ ಜ್ಞಾನೋದಯ ಪಡೆದರು ಎಂದು ತಿಳಿಸಿದರು. 

ಇಂದಿನ ಖಾಂಡ್ವಾ ಜಿಲ್ಲೆಯ ದೇವಾಲಯ ಪಟ್ಟಣದಲ್ಲಿ ಜ್ಞಾನವನ್ನು ಪಡೆದ ನಂತರ, 8 ನೇ ಶತಮಾನದ ತತ್ವಜ್ಞಾನಿ ಕಾಶಿಗೆ ಪ್ರಯಾಣ ಬೆಳೆಸಿದರು ಎಂದು ಸಿಎಂ ಹೇಳಿದರು.

ಬಹು-ಲೋಹದ ಗೋಪುರದ ರಚನೆಯು ಓಂಕಾರೇಶ್ವರ ನರ್ಮದಾ ನದಿಯ ದಡದಲ್ಲಿರುವ ಸುಂದರವಾದ ಮಾಂಧಾತಾ ಬೆಟ್ಟದ ಮೇಲೆ ನೆಲೆಗೊಂಡಿದೆ. ಕಳೆದ ಕೆಲವು ದಿನಗಳಿಂದ ದೇವಾಲಯದ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಪುರೋಹಿತರು ಮತ್ತು ಸಂತರು ಈಗಾಗಲೇ ಜಮಾಯಿಸಿದ್ದಾರೆ ಮತ್ತು ಯಜ್ಞ ಸೇರಿದಂತೆ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ.

ಸಿಎಂ ಚೌಹಾಣ್ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಧಾರ್ಮಿಕ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 18 ರಂದು ಭವ್ಯ ಪ್ರತಿಮೆಯನ್ನು ಸಿಎಂ ಅನಾವರಣ ಮಾಡಬೇಕಿತ್ತು, ಆದರೆ ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ, ಕಾರ್ಯಕ್ರಮವನ್ನು ಸೆಪ್ಟೆಂಬರ್ 21 ಕ್ಕೆ ಮರು ನಿಗದಿಪಡಿಸಲಾಗಿದೆ.

ಓಂಕಾರೇಶ್ವರದಲ್ಲಿ ಮ್ಯೂಸಿಯಂ ಜೊತೆಗೆ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಲು ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಈ ಹಿಂದೆ ರೂ.  2,141.85 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com