ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾ ಯಾವುದೇ ಪುರಾವೆ ಹಂಚಿಕೊಂಡಿಲ್ಲ; ರಾಜತಾಂತ್ರಿಕರ ಸಂಖ್ಯೆ ಕಡಿತಕ್ಕೆ ಸೂಚನೆ: ಭಾರತ

ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ವಿವಾದದ ನಡುವೆ, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ವಿವಾದದ ನಡುವೆ, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ನಮಗೆ ಒದಗಿಸಲಾದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೋಡಲು ನಾವು ಸಿದ್ಧರಿದ್ದೇವೆ, ಆದರೆ ಇಲ್ಲಿಯವರೆಗೆ ನಾವು ಕೆನಡಾದಿಂದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಸ್ವೀಕರಿಸಿಲ್ಲ  ಎಂದು ಗುರುವಾರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಕೆನಡಾ ನೆಲ ಆಧರಿಸಿದ ವ್ಯಕ್ತಿಗಳಿಂದ ಅಪರಾಧ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟ ಪುರಾವೆಗಳನ್ನು ಕೆನಡಾದೊಂದಿಗೆ ನಾವು ಹಂಚಿಕೊಂಡಿದ್ದೇವೆ. ಆದರೆ ಅದರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೌದು, ಇಲ್ಲಿ ಪೂರ್ವಾಗ್ರಹ ಪೀಡಿತದ ಸಮಸ್ಯೆಯಾಗಿದೆ ಎಂದು ಭಾವಿಸುತ್ತೇನೆ. ಅದರ ಆಧಾರದ ಮೇಲೆ ಅವರು ಆರೋಪ ಮಾಡಿದ್ದು, ಕೈಗೊಂಡಿದ್ದಾರೆ. ಕೆನಡಾ ಸರ್ಕಾರದ ಈ ಆರೋಪಗಳು ಪ್ರಾಥಮಿಕವಾಗಿ ರಾಜಕೀಯ ಪ್ರೇರಿತವಾಗಿವೆ ಎಂಬುದು ತೋರಿಸುತ್ತವೆ ಎಂದು ಪ್ರಶ್ನೆಗಳ ಸುರಿಮಳೆಗಳೆದರು. 

ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಕೆನಡಾ ಸರ್ಕಾರಕ್ಕೆ ಸಮಾನತೆ ಯನ್ನು ತಿಳಿಸಲಾಗಿದೆ. ರಾಜತಾಂತ್ರಿಕ ಉಪಸ್ಥಿತಿಯೊಂದಿಗೆ ಸಮಾನತೆ ಹೊಂದಲು ಕೆನಡಾದ ಸರ್ಕಾರಕ್ಕೆ ತಿಳಿಸಿದ್ದೇವೆ, ಅವರ ರಾಯಭಾರಿಗಳ ಸಂಖ್ಯೆಗಳು ಹೆಚ್ಚಿದ್ದು,  ಕಡಿತವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಹರ್ದೀಪ್ ನಿಜ್ಜಾರ್ ಅವರ ಗುಂಡಿನ ದಾಳಿಯ ಹಿಂದೆ "ಭಾರತೀಯ ಏಜೆಂಟರು" ಇದ್ದಾರೆ ಎಂದು ಪ್ರಧಾನಿ ಟ್ರುಡೊ ಸೋಮವಾರ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಇಳಿಮುಖವಾಗಿದೆ.
ವೀಸಾ ಸೇವೆಗಳನ್ನು ಒದಗಿಸುವ ಬಿಎಲ್ ಎಸ್ ಇಂಟರ್‌ನ್ಯಾಶನಲ್ ತಕ್ಷಣ ಜಾರಿಗೆ ಬರುವಂತೆ ಕೆನಡಾದಲ್ಲಿ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com