ಮಹಿಳಾ ಮೀಸಲಾತಿ ಒಳ್ಳೆಯದು, ಆದರೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಆಗಬೇಕು: ರಾಹುಲ್ ಗಾಂಧಿ

ಮಹಿಳಾ ಮೀಸಲಾತಿ ಮಸೂದೆ ಒಳ್ಳೆಯದೇ, ಆದರೆ ಇಲ್ಲಿ ಎರಡು ಅಂಶಗಳು ಮುಖ್ಯವಾಗಿದೆ. ಒಂದು ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ಮೊದಲು ಜನಗಣತಿಯನ್ನು ಮಾಡಬೇಕು ಮತ್ತು ಎರಡನೆಯದು ಕ್ಷೇತ್ರ ಮರುವಿಂಗಡಣೆ. ಇದನ್ನು ಮಾಡಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ಒಳ್ಳೆಯದೇ, ಆದರೆ ಇಲ್ಲಿ ಎರಡು ಅಂಶಗಳು ಮುಖ್ಯವಾಗಿದೆ. ಒಂದು ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ಮೊದಲು ಜನಗಣತಿಯನ್ನು ಮಾಡಬೇಕು ಮತ್ತು ಎರಡನೆಯದು ಕ್ಷೇತ್ರ ಮರುವಿಂಗಡಣೆ. ಇದನ್ನು ಮಾಡಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸತ್ಯವೆಂದರೆ ಮಹಿಳೆಯರಿಗೆ ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡ 33 ಮೀಸಲಾತಿ ನೀಡಬಹುದು, ಇದು ಸಂಕೀರ್ಣವಾದ ವಿಷಯವಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಕೂಡ ಅಂಗೀಕಾರವಾದ ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆ ಬಗ್ಗೆ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಈ ಎರಡು ಅಂಶಗಳನ್ನು ತೆಗೆದುಹಾಕಬೇಕು. ಮಹಿಳೆಯರಿಗೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು. ನಾವು ಮಾಡಿದ ಜಾತಿ ಗಣತಿಯ ಅಂಕಿಅಂಶವನ್ನು ಇಂದಿನ ಸರ್ಕಾರ ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದರು.

"ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವುದು ಈಗಿರುವ ಸಮಸ್ಯೆಯಾಗಿದೆ. ಇದು ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಇದು ಒಬಿಸಿ ಜನಗಣತಿಯಿಂದ ಸರ್ಕಾರ ಗೊಂದಲ ಮತ್ತು ತಿರುವು ತಂತ್ರವಾಗಿದೆ. ಸತ್ಯವೆಂದರೆ ಮೀಸಲಾತಿಯನ್ನು ಇಂದೇ ಜಾರಿಗೊಳಿಸಬಹುದು. ಇದು ಸಂಕೀರ್ಣವಾದ ವಿಷಯವಲ್ಲ, ಆದರೆ ಸರ್ಕಾರವು ಹಾಗೆ ಮಾಡಲು ಬಯಸುವುದಿಲ್ಲ. ಇದು ಜಾರಿಗೆ ಬರುವಾಗ ಇನ್ನು 10 ವರ್ಷಗಳಾಗಬಹುದು ಎಂದು ಕೇಂದ್ರ ಸರ್ಕಾರವನ್ನು ಕುಟುಕಿದರು. 

2010 ರಲ್ಲಿ ಯುಪಿಎ ತಂದ ಮಸೂದೆಯಡಿಯಲ್ಲಿ ಒಬಿಸಿ ಕೋಟಾವನ್ನು ಒದಗಿಸಿಲ್ಲ ಎಂಬ ಬಗ್ಗೆ ವಿಷಾದವಿದೆಯೇ ಎಂದು ಕೇಳಿದಾಗ, ಖಂಡಿತಾ ನಮಗೆ ವಿಷಾದ ಇದೆ, ಇದನ್ನು ಆಗ ಮಾಡಬೇಕಿತ್ತು. ಈಗಲಾದರೂ ಜಾರಿಗೆ ಬರಲಿ ಎಂಬುದು ನಮ್ಮ ಆಶಯವಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com