ಖಲೀಸ್ಥಾನ್ ನಾಯಕ ಕರಣ್ವೀರ್ ವಿರುದ್ಧ ಇಂಟರ್ ಪೋಲ್ ನೊಟೀಸ್
ನವದೆಹಲಿ: ಇಂಟರ್‌ಪೋಲ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಇಂಟರ್‌ನ್ಯಾಶನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಶನ್ ಸೋಮವಾರ ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ಸದಸ್ಯ ಕರಣ್ವೀರ್ ಸಿಂಗ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಖಾಲಿಸ್ತಾನಿ ನಾಯಕನಿಗೆ ರೆಡ್ ಕಾರ್ನರ್ ನೋಟಿಸ್ ಹಾಕುವ ಮೂಲಕ ಇಂಟರ್‌ಪೋಲ್ ತನ್ನ ವೆಬ್‌ಸೈಟ್ ಅನ್ನು ಅಪ್ ಡೇಟ್ ಮಾಡಿದೆ.
ಗುಪ್ತಚರ ಮೂಲಗಳ ಪ್ರಕಾರ, ಸಿಂಗ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ನಂಬಲಾಗಿದೆ. ಈತ ಖಲಿಸ್ತಾನ್ ಪರ ಭಯೋತ್ಪಾದಕ ಗುಂಪಿನ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸದಸ್ಯನಾಗಿದ್ದಾನೆ.
ಇಂಟರ್‌ಪೋಲ್ ಪೋರ್ಟಲ್ ಪ್ರಕಾರ, 38 ವರ್ಷದ ಕರಣ್‌ವೀರ್ ಸಿಂಗ್ ಪಂಜಾಬ್‌ನ ಕಪುರ್ತಲಾ ಜಿಲ್ಲೆಯಲ್ಲಿದ್ದಾನೆ.
ಇಂಟರ್‌ಪೋಲ್ ಪ್ರಕಾರ, ಸಿಂಗ್, ಕ್ರಿಮಿನಲ್ ಪಿತೂರಿ, ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗೆ ಸಂಬಂಧಿಸಿದ ಅಪರಾಧಗಳು, ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು, ಪಿತೂರಿ ಮತ್ತು ಭಯೋತ್ಪಾದಕ ಗ್ಯಾಂಗ್ ಅಥವಾ ಸಂಘಟನೆಯ ಸದಸ್ಯರಾಗಿದ್ದಕ್ಕಾಗಿ ಭಾರತಕ್ಕೆ ಬೇಕಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ