ಸಂಸತ್ತಿನಲ್ಲಿ ಮುಸ್ಲಿಮರ ಗುಂಪು ಹತ್ಯೆ ದಿನ ದೂರ ಇಲ್ಲ: ಬಿಧುರಿ ಹೇಳಿಕೆ ವಿರುದ್ಧ ಓವೈಸಿ ತೀವ್ರ ವಾಗ್ದಾಳಿ

ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಂಸತ್ತಿನಲ್ಲಿ ಮುಸ್ಲಿಮರ ಗುಂಪು ಹತ್ಯೆ ದಿನ ದೂರ ಇಲ್ಲ ಎಂದು ಆತಂಕ ಪಡಿಸಿದ್ದಾರೆ. 
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಂಸತ್ತಿನಲ್ಲಿ ಮುಸ್ಲಿಮರ ಗುಂಪು ಹತ್ಯೆ ದಿನ ದೂರ ಇಲ್ಲ ಎಂದು ಆತಂಕ ಪಡಿಸಿದ್ದಾರೆ. 
 
ತಮ್ಮ ಸಂಸದೀಯ ಕ್ಷೇತ್ರವಾದ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಸಂಸದರೊಬ್ಬರು ಮುಸ್ಲಿಂ ಸಂಸದರೊಬ್ಬರನ್ನು ಸಂಸತ್ತಿನಲ್ಲಿ ನಿಂದಿಸುವುದನ್ನು ನಾವು ನೋಡುತ್ತೇವೆ, ಸಂಸತ್ತಿನಲ್ಲಿ ಇದನ್ನೆಲ್ಲಾ ಹೇಳಬಾರದಿತ್ತು ಎಂದು ಜನರು ಹೇಳುತ್ತಿದ್ದಾರೆ, ಅವರ ನಾಲಿಗೆ ಕೆಟ್ಟಿದೆ ಎಂದು ಹೇಳುತ್ತಿದ್ದಾರೆ, ಇದು ನೀವು ಯಾರಿಗೆ ಮತ ಹಾಕಿದ್ದೀರೋ ಆ ಜನರ ಪ್ರತಿನಿಧಿ. ದೇಶದ ಸಂಸತ್ತಿನಲ್ಲಿ ಮುಸಲ್ಮಾನರ ಮೇಲೆ ಗುಂಪು ಹತ್ಯೆಯ ದಿನ ದೂರ ಇಲ್ಲ ಎಂದರು. 

ಇದನ್ನೂ ಓದಿ: ನನ್ನ ಮೇಲೆ ಸಾಮೂಹಿಕ ಹಲ್ಲೆಗೆ ವೇದಿಕೆ ಸೃಷ್ಟಿಸಲಾಗುತ್ತಿದೆ: ಬಿಜೆಪಿ ನಾಯಕನ ಪತ್ರದ ಬಗ್ಗೆ ಸಂಸದ ಡ್ಯಾನಿಶ್ ಅಲಿ
 
ಲೋಕಸಭೆಯಲ್ಲಿ ಗುರುವಾರ ಚಂದ್ರಯಾನ-3 ಯಶಸ್ಸಿನ ಕುರಿತ ಚರ್ಚೆಯ ವೇಳೆ ಕೋಮು ಹಾಗೂ ಕೆಟ್ಟ ಹೇಳಿಕೆಯಿಂದಾಗಿ ಬಿಧುರಿ ಅವರಿಗೆ ಅಮಾನತು ಸೇರಿದಂತೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿದವು. ಬಿಜೆಪಿ ತನ್ನ ಸಂಸದಿನಿಗೆ ಶಿಕ್ಷೆ ಕೊಡುವ ಬದಲು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದವು. ಈ ವಿಚಾರದ ಬಗ್ಗೆ ಸ್ಪೀಕರ್ ವಿಚಾರಣೆ ನಡೆಸದಿದ್ದರೆ ಸಂಸತ್ ಹೊರಡುವುದಾಗಿ ಆಲಿ ಹೇಳಿದ್ದಾರೆ. 

ಇಂತಹ ವರ್ತನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಬಿಧುರಿಗೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಶನಿವಾರ ಸ್ಪೀಕರ್‌ಗೆ ಪತ್ರ ಬರೆದಿದ್ದು, ತಮ್ಮ ಪಕ್ಷದ ಸಹೋದ್ಯೋಗಿಯ ಹೇಳಿಕೆಯನ್ನು ಖಂಡಿಸುವ ಸಂದರ್ಭದಲ್ಲಿ, ಅಲಿಯವರ "ಅಸಹ್ಯಕರ" ನಡವಳಿಕೆ ಮತ್ತು ಟೀಕೆಗಳ ಕುರಿತು ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com