ಶ್ರೀಲಂಕಾ ರಾಷ್ಟ್ರಧ್ವಜ
ಶ್ರೀಲಂಕಾ ರಾಷ್ಟ್ರಧ್ವಜ

ಕೆನಡಾ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ: ಟುಡ್ರೋ ವಿರುದ್ಧ ಲಂಕಾ ವಿದೇಶಾಂಗ ಸಚಿವರ ಆರೋಪ

ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸಬ್ರೇ ಕೆನಡಾ ಪ್ರಧಾನಿ ಜಸ್ಟಿನ್ ಟುಡ್ರೋ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ: ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸಬ್ರೇ ಕೆನಡಾ ಪ್ರಧಾನಿ ಜಸ್ಟಿನ್ ಟುಡ್ರೋ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಟ್ರುಡೋ ಯಾವುದೇ ಸ್ಪಷ್ಟ ದಾಖಲೆಗಳೂ ಇಲ್ಲದೇ ಆರೋಪ ಮಾಡುತ್ತಾರೆ ಎಂದು ಲಂಕಾ ವಿದೇಶಾಂಗ ಸಚಿವರು ಆರೋಪ ಮಾಡಿದ್ದು, ಭಾರತ-ಕೆನಡಾ ನಡುವೆ ರಾಜತಾಂತ್ರಿಕ ವಿವಾದ ಉಂಟಾಗಿರುವ ಬೆನ್ನಲ್ಲೇ ಲಂಕಾ ಸಚಿವರ ಹೇಳಿಕೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.

ಕೆನಡಾದಲ್ಲಿ ಕಲವು ಭಯೋತ್ಪಾದಕರು ಸುರಕ್ಷಿತ ಸ್ವರ್ಗವನ್ನು ಕಂಡುಕೊಂಡಿದ್ದಾರೆ. ಕೆನಡಾದ ಪ್ರಧಾನಿ  ಯಾವುದೇ ಪುರಾವೆಗಳಿಲ್ಲದೆ ಕೆಲವು ಅತಿರೇಕದ ಆರೋಪಗಳನ್ನು ಹೊರತರುವ ವಿಧಾನವನ್ನು ಹೊಂದಿದ್ದಾರೆ ಎಂದು ಎಎನ್ಐ ಗೆ ನೀಡಿರುವ ಸಂದರ್ಶನದಲ್ಲಿ ಲಂಕಾ ವಿದೇಶಾಂಗ ಸಚಿವರು ಆರೋಪ ಮಾಡಿದ್ದಾರೆ.

"ಶ್ರೀಲಂಕಾ ವಿರುದ್ಧವೂ ಕೆನಡಾ ಇದೇ ಮಾದರಿಯಲ್ಲಿ ಆರೋಪಿಸಿತ್ತು. ಶ್ರೀಲಂಕಾದಲ್ಲಿ ನರಮೇಧವಿದೆ ಎಂದು ಹೇಳುವ ಭಯಾನಕ, ಸಂಪೂರ್ಣ ಸುಳ್ಳನ್ನು ನಮ್ಮ ಮೇಲೆ ಹೊರಿಸಲಾಗಿತ್ತು. ನಮ್ಮ ದೇಶದಲ್ಲಿ ಯಾವುದೇ ನರಮೇಧ ನಡೆದಿಲ್ಲ ಎಂದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ.

"ನಾನು ನಿನ್ನೆ ನೋಡಿದ್ದೇನೆ, ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಂದೆ ನಾಜಿಗಳೊಂದಿಗೆ ಸಂಬಂಧ ಹೊಂದಿದ್ದ ಯಾರಿಗೋ ಹೋಗಿ ಅದ್ದೂರಿ ಸ್ವಾಗತವನ್ನು ನೀಡಿದರು. ಆದ್ದರಿಂದ ಇದು ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಟ್ರುಡೊ ನಾಜಿ ವಿಭಾಗದ ಅನುಭವಿಯೊಬ್ಬರನ್ನು ಗೌರವಿಸಿದ ನಂತರ ಭುಗಿಲೆದ್ದ ಇತ್ತೀಚಿನ ವಿವಾದವನ್ನು ಉಲ್ಲೇಖಿಸಿ ಲಂಕಾ ಸಚಿವರು ಮಾತನಾಡುತ್ತಿದ್ದರು.

Related Stories

No stories found.

Advertisement

X
Kannada Prabha
www.kannadaprabha.com