
ನವದೆಹಲಿ: ಬಿಎಸ್ ಪಿ ಸಂಸದ ಡ್ಯಾನಿಶ್ ಅಲಿಯನ್ನು ಲೋಕಸಭೆಯಲ್ಲಿ ಅವಮಾನಕರ ರೀತಿಯಲ್ಲಿ ನಿಂದಿಸಿದ ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣೆಯ ಹೊಣೆಗಾರಿಕೆ ನೀಡಲಾಗಿದೆ.
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಟೊಂಕ್ ಜಿಲ್ಲೆಯ ಜವಾಬ್ದಾರಿಯನ್ನು ರಮೇಶ್ ಬಿಧುರಿಗೆ ವಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಕ್ಷೇತ್ರದಲ್ಲಿ ಗುರ್ಜರ್ ಸಮುದಾಯ ಪ್ರಬಲವಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ ಈ ಪೈಕಿ ಒಂದರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸಹ ಸ್ಪರ್ಧಿಸುತ್ತಾರೆ. ಬಿಜೆಪಿಯ ಪ್ರಕಾರ ಗುರ್ಜರ್ ಸಮುದಾಯದವರೇ ಆದ ಬಿಧುರಿ ಮತಗಳನ್ನು ಸೆಳೆಯಬಲ್ಲರು ಎಂಬ ಲೆಕ್ಕಾಚಾರವಿದೆ. ಸಚಿನ್ ಪೈಲಟ್ ಸಹ ಗುರ್ಜರ್ ಸಮುದಾಯದವರೇ ಆಗಿರುವುದು ಗಮನಾರ್ಹ ಸಂಗತಿ.
Advertisement