ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಅಸಮರ್ಥ: ಬಿಜೆಪಿ ತೊರೆದ ಮಣಿಪುರಿ ನಟ

ಗಲಭೆಯನ್ನು ನಿರ್ವಹಿಸುವಲ್ಲಿ ಸರ್ಕಾರದ ಅಸಮರ್ಥತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಣಿಪುರದ ಖ್ಯಾತ ನಟ ಬಿಜೆಪಿ ತೊರೆದಿದ್ದಾರೆ. 
ಮಣಿಪುರಿ ನಟ
ಮಣಿಪುರಿ ನಟ
Updated on

ಇಂಫಾಲ: ಗಲಭೆಯನ್ನು ನಿರ್ವಹಿಸುವಲ್ಲಿ ಸರ್ಕಾರದ ಅಸಮರ್ಥತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಣಿಪುರದ ಖ್ಯಾತ ನಟ ಬಿಜೆಪಿ ತೊರೆದಿದ್ದಾರೆ. 

ರಾಜ್ ಕುಮಾರ್ ಕೈಕು ಎಂದೇ ಖ್ಯಾತರಾಗಿರುವ ಸೋಮೇಂದ್ರ ಬಿಜೆಪಿ ತೊರೆದಿರುವ ನಟ. 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೈಕು ನಟಿಸಿದ್ದು, ಎರಡು ಕುಕಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಜೆಪಿ ಮನವಿ ಮಾಡಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ  ಪರಾಭವಗೊಂಡಿದ್ದ ಈ ನಟ 2021ರ ನವೆಂಬರ್ ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಮಣಿಪುರದಲ್ಲಿ ಗಲಭೆಗಳು ಮತ್ತೆ ಹೆಚ್ಚಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಪ್ರಹಾರ ಮಾಡಿದ ಪರಿಣಾಮ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com