ಪಾಕಿಸ್ತಾನ ಭಯೋತ್ಪಾದನೆಯ ತಾಯಿ: ಜಮ್ಮು ಮತ್ತು ಕಾಶ್ಮೀರ ಡಿಜಿಪಿ

ಕೇಂದ್ರಾಡಳಿತ ಪ್ರದೇಶದಲ್ಲಿ ಪಾಕಿಸ್ತಾನ ಭಯೋತ್ಪಾದನೆಯ ತಾಯಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ದಿಲ್ಬಾಗ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ದಿಲ್ಬಾಗ್ ಸಿಂಗ್
ದಿಲ್ಬಾಗ್ ಸಿಂಗ್

ಶ್ರೀನಗರ: ಕೇಂದ್ರಾಡಳಿತ ಪ್ರದೇಶದಲ್ಲಿ ಪಾಕಿಸ್ತಾನ ಭಯೋತ್ಪಾದನೆಯ ತಾಯಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ದಿಲ್ಬಾಗ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
  
ಇಂದು ದೋಡಾ ಜಿಲ್ಲೆಗೆ ಭೇಟಿ ನೀಡಿದ ದಿಲ್ಬಾಗ್ ಸಿಂಗ್ ಅವರು, ಗಂಡೋಹ್‌ನಲ್ಲಿ ಪೊಲೀಸ್ ಸಂಕೀರ್ಣವನ್ನು ಉದ್ಘಾಟಿಸಿದರು ಮತ್ತು ಕಣಿವೆಯ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ, "ಪಂಜಾಬ್‌ನಲ್ಲಿ ಉಗ್ರವಾದ ನಡೆಯುತ್ತಿದ್ದಾಗ, ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳು ಅದರ ಪ್ರಭಾವಕ್ಕೆ ಒಳಗಾಗಿದ್ದವು. ಪಂಜಾಬ್‌ನ ಉಗ್ರವಾದ ಅಂತ್ಯವಾದ ನಂತರ, ಕಾಶ್ಮೀರದಲ್ಲಿ ಭಯೋತ್ಪಾದನೆ ಆರಂಭವಾಯಿತು. ಎರಡೂ ಸ್ಥಳಗಳಲ್ಲಿನ ಭಯೋತ್ಪಾದನೆಯ ತಾಯಿ ಒಬ್ಬರೇ ಅದು ಪಾಕಿಸ್ತಾನ" ಎಂದು ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನಿ ಏಜೆನ್ಸಿಗಳು ನಡೆಸುತ್ತಿರುವ ಭಯೋತ್ಪಾದನೆಯ ಮೇಲೆ ನಮ್ಮ ಭದ್ರತಾ ಪಡೆಗಳು ಕಟ್ಟುನಿಟ್ಟಿನ ನಿಗಾ ವಹಿಸುತ್ತಿವೆ ಎಂದು ಸಿಂಗ್ ತಿಳಿಸಿದ್ದಾರೆ.

ಭಯೋತ್ಪಾದನೆ ನಿರ್ಮೂಲನೆ ಮಾಡಲು ಪ್ರಸ್ತುತ ಕಾರ್ಯಾಚರಣೆ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಎಂದು ನಾನು ನಂಬುತ್ತೇನೆ. ಗಂಡೋ, ಕಿಶ್ತ್ವಾರ್ ಮತ್ತು ದೋಡಾದ ಜನರು ಶಾಂತಿಯ ವಾತಾವರಣದಲ್ಲಿ ತಮ್ಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com