ಗುಜರಾತ್ ಪೊಲೀಸರಿಂದ 'ಸಂಶಯಾಸ್ಪದ' ದೋಣಿ ಜಪ್ತಿ, ಮೂವರು ಇರಾನಿಯನ್ನರು ಸೇರಿ ಐವರ ಬಂಧನ

ಗುಜರಾತ್ ಪೊಲೀಸರು ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಬಳಿ 'ಅನುಮಾನಾಸ್ಪದ' ದೋಣಿಯೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಮೂವರು ಇರಾನ್ ಪ್ರಜೆಗಳು ಮತ್ತು ತಮಿಳುನಾಡಿನ ಇಬ್ಬರು ಸೇರಿದಂತೆ ಐವರನ್ನು ಗುರುವಾರ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಅಹಮದಾಬಾದ್: ಗುಜರಾತ್ ಪೊಲೀಸರು ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಬಳಿ 'ಅನುಮಾನಾಸ್ಪದ' ದೋಣಿಯೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಮೂವರು ಇರಾನ್ ಪ್ರಜೆಗಳು ಮತ್ತು ತಮಿಳುನಾಡಿನ ಇಬ್ಬರು ಸೇರಿದಂತೆ ಐವರನ್ನು ಗುರುವಾರ ಬಂಧಿಸಿದ್ದಾರೆ. ದೋಣಿಯಲ್ಲಿದ್ದ ಉಪಗ್ರಹ ಫೋನ್ ಮತ್ತು ಡ್ರಗ್ಸ್ ಅನ್ನು ಸಹ ಜಪ್ತಿ ಮಾಡಲಾಗಿದೆ.

“ಒಖಾದಲ್ಲಿನ ಸಿಗ್ನೇಚರ್ ಸೇತುವೆ ಸಮೀಪಿಸುತ್ತಿದ್ದ ಅನುಮಾನಾಸ್ಪದ ಜಲನೌಕೆಯ ಬಗ್ಗೆ SOGಗೆ ಮಾಹಿತಿ ಸಿಕ್ಕಿತು. ಅವರು ಸ್ಥಳಕ್ಕೆ ಬಂದಾಗ, ದೋಣಿಯೊಂದು ಕತ್ತಲೆಯಲ್ಲಿ ದಡ ಸೇರುತ್ತಿತ್ತು. ದೋಣಿಯನ್ನು ತಡೆದು ವಿಚಾರಣೆ ನಡೆಸಿದಾಗ ಮೂವರು ಇರಾನ್ ಪ್ರಜೆಗಳು ಮತ್ತು ಇಬ್ಬರು ಭಾರತೀಯ ಪ್ರಜೆಗಳು ಎಂಬುದು ಗೊತ್ತಾಗಿದ್ದು, ಈ ವ್ಯಕ್ತಿಗಳು ಇರಾನ್‌ನಿಂದ ದೋಣಿಯಲ್ಲಿ ಆಗಮಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪೊಲೀಸರು ನೌಕೆಯನ್ನು ಪರಿಶೀಲಿಸಿದ್ದು, ಅದರಲ್ಲಿದ್ದ 5,01,000 ರೂಪಾಯಿ ಮೌಲ್ಯದ ಉಪಗ್ರಹ ಫೋನ್ ಮತ್ತು 10.02 ಗ್ರಾಂ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಓಖಾ ಮೆರೈನ್ ಪೊಲೀಸ್ ಠಾಣೆಯಲ್ಲಿ ಎನ್‌ಸಿಪಿಎಸ್ ಕಾಯ್ದೆ, ಪಾಸ್‌ಪೋರ್ಟ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇರಾನ್‌ನಿಂದ ರಾಜ್‌ಕೋಟ್ ಮೂಲಕ ಓಖಾ ತಲುಪಿದ್ದ ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯ ಸಹೋದರನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಂಧಿತ ಭಾರತೀಯ ಪ್ರಜೆ, ತಮಿಳುನಾಡಿನ ಕೊಯಮತ್ತೂರಿನ ನಿವಾಸಿಯಾಗಿದ್ದು, ಇರಾನ್‌ನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕ ಆತನ ಪಾಸ್‌ಪೋರ್ಟ್ ಕಿತ್ತುಕೊಂಡಿದ್ದಾರೆ. ಪಾಸ್‌ಪೋರ್ಟ್ ಇಲ್ಲದೆ, ಮೂವರು ಇರಾನಿಯನ್ನರ ಸಹಾಯದಿಂದ ಅಕ್ರಮವಾಗಿ ಭಾರತ ಪ್ರವೇಶಿಸಲು ನಿರ್ಧರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com