ಗುಜರಾತ್: ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್!

ಚಂದ್ರಯಾನ-3 ಯಶಸ್ವಿ ನಂತರ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ದೇಶದ ವಿವಿಧ ಪವಿತ್ರ ಸ್ಥಳಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಸೋಮನಾಥ ದೇವಾಲಯದಲ್ಲಿ ಇಸ್ರೋ ಮುಖ್ಯಸ್ಥರಿಂದ ವಿಶೇಷ ಪೂಜೆ
ಸೋಮನಾಥ ದೇವಾಲಯದಲ್ಲಿ ಇಸ್ರೋ ಮುಖ್ಯಸ್ಥರಿಂದ ವಿಶೇಷ ಪೂಜೆ

ಸೌರಾಷ್ಟ್ರ: ಚಂದ್ರಯಾನ-3 ಯಶಸ್ವಿ ನಂತರ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ದೇಶದ ವಿವಿಧ ಪವಿತ್ರ ಸ್ಥಳಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ ಎಲ್1 ಉಡಾವಣೆಗೂ ಮುನ್ನಾ  ತಿರುಪತಿ ಹಾಗೂ ಸುಳ್ಳೂರುಪೇಟೆ ಪಟ್ಟಣದ ಚೆಂಗಾಲಮ್ಮ ದೇವಸ್ಥಾನದಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ಎಸ್. ಸೋಮನಾಥ್ ಅವರು, ಇದೀಗ ಗುಜರಾತ್ ನ ಪವಿತ್ರ ಕ್ಷೇತ್ರ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ  ಸಲ್ಲಿಸಿದ್ದಾರೆ. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, ಚಂದ್ರಯಾನ-3 ಯಶಸ್ವಿಯಾಗಿರುವುದು ನಮ್ಮ ಅದೃಷ್ಟವಾಗಿದೆ. ಪ್ರಯತ್ನದ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಿದೆ. ಇದು ಸೋಮನಾಥ ದೇವರ ಆಶೀರ್ವಾದವಾಗಿದೆ. ನಾವು ಇತರ ಮಿಷನ್ ಗಾಗಿ ಕೆಲಸ ಮಾಡುತ್ತಿದ್ದು, ನಮಗೆ ದೇವರಿಂದ ಶಕ್ತಿ ಹಾಗೂ ಆಶೀರ್ವಾದದ ಅಗತ್ಯವಿದೆ ಎಂದರು. 

ಸೋಮನಾಥ ದೇವಾಲಯವು ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ವೆರಾವಲ್‌  ಪ್ರಭಾಸ್ ಪಟಾನ್‌ನಲ್ಲಿ ಕರಾವಳಿ ತೀರದಲ್ಲಿದೆ. ಈ  ದೇವಾಲಯವು ಜಗತ್ತಿನಲ್ಲೇ ಅತಿ ಪ್ರಮುಖ ಶಿವಾಲಯವಾಗಿದ್ದು, ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ.  ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಈ ದೇವಾಲಯವನ್ನು ಚಂದ್ರದೇವ್ ಸೋಮರಾಜ್ ನಿರ್ಮಿಸಿರುವುದನ್ನು ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com