ನ್ಯಾಯಾಂಗದ ಮೇಲೆ ಬಿಜೆಪಿ ಹಿಡಿತ ಸಾಧಿಸಿದ ದಿನ ಪ್ರಜಾಪ್ರಭುತ್ವದ ಕೊನೆಯ ದಿನ: ಉದ್ಧವ್ ಠಾಕ್ರೆ
ನ್ಯಾಯಾಂಗದ ಮೇಲೆ ಬಿಜೆಪಿ ಹಿಡಿತ ಸಾಧಿಸಿದ ದಿನ ಭಾರತದಲ್ಲಿ ಪ್ರಜಾಪ್ರಭುತ್ವದ ಕೊನೆಯ ದಿನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
Published: 03rd April 2023 01:13 AM | Last Updated: 03rd April 2023 01:13 AM | A+A A-

ಉದ್ಧವ್ ಠಾಕ್ರೆ
ಮುಂಬೈ: ನ್ಯಾಯಾಂಗದ ಮೇಲೆ ಬಿಜೆಪಿ ಹಿಡಿತ ಸಾಧಿಸಿದ ದಿನ ಭಾರತದಲ್ಲಿ ಪ್ರಜಾಪ್ರಭುತ್ವದ ಕೊನೆಯ ದಿನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಂಭಾಜಿ ನಗರದಲ್ಲಿ ಮಹಾ ವಿಕಾಸ್ ಅಘಾಡಿಯ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಸಿಎಂ, ಯಾವ ದಿನ ನ್ಯಾಯಾಂಗವು ಬಿಜೆಪಿಯ ಕೈಗೆ ಹೋಗುತ್ತದೆ. ಆ ದಿನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಕೊನೆಯ ದಿನವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಮತ್ತು ಅದರ ಸಚಿವರು ನ್ಯಾಯಾಂಗದ ಮೇಲೆ ದಾಳಿಯನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಸ್ವತಂತ್ರ ಕೊಲಿಜಿಯಂ - ನ್ಯಾಯಾಧೀಶರ ನೇಮಕಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಮೂಲಕ ಅದನ್ನು ತಮ್ಮ ನಿಯಂತ್ರಣಕ್ಕೆ ತರುವ ಯೋಜನೆಯನ್ನು ಹೊಂದಿದ್ದಾರೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಪ್ರಜಾಪ್ರಭುತ್ವದ ಎಲ್ಲಾ ಪ್ರಮುಖ ಸ್ತಂಭಗಳನ್ನು ಬಿಜೆಪಿ ಅಧಿಕಾರಕ್ಕಾಗಿ ನಾಶಪಡಿಸಿದೆ. ಭರವಸೆಯ ಕೊನೆಯ ಆಶಾಕಿರಣವೆಂದರೆ ನ್ಯಾಯಾಂಗ. ಒಮ್ಮೆ ಈ ಕೊನೆಯ ಸ್ತಂಭವೂ ಹೋದರೆ ಆ ದಿನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಕೊನೆಯ ದಿನವಾಗಿರುತ್ತದೆ. ಇಸ್ರೇಲ್‌ನಲ್ಲಿ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ರಕ್ಷಿಸಲು ಜನರು ಬೀದಿಗೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತರಾಗಿರುವ ಇಸ್ರೇಲ್ ಪ್ರಧಾನಿ ಮೋದಿಯವರಂತೆ ಎಲ್ಲವನ್ನೂ ತಮ್ಮ ಹಿಡಿತದಲ್ಲಿರಬೇಕೆಂದು ಬಯಸುತ್ತಾರೆ. ಆದರೆ ಜನರು ಅದನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಸಂವಿಧಾನವನ್ನು ಉಳಿಸಲು ನಾವು ಇದೇ ರೀತಿಯ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಇದನ್ನೂ ಓದಿ: ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಮೋದಿ ನಂ.1: ಶೇ.76 ರಷ್ಟು ಮತ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಮೇಜ್ ಬಗ್ಗೆ ಚಿಂತಿತರಾಗಿದ್ದಾರೆ. ಪ್ರತಿಪಕ್ಷಗಳು ತಮ್ಮ ಇಮೇಜ್ ಅನ್ನು ಹಾಳು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. 'ಪ್ರಧಾನಿ ಅವರಿಗೆ ಇಮೇಜ್ ಇದೆ. ಆದರೆ ಪ್ರತಿಪಕ್ಷಗಳು ಯಾವುದೇ ಇಮೇಜ್ ಇಲ್ಲವೇ? ಕ್ಷುಲ್ಲಕ ವ್ಯಕ್ತಿಗಳು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತಮ್ಮ ಇಮೇಜ್ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಠಾಕ್ರೆ ಪ್ರಶ್ನಿಸಿದರು.
ಮಹಾ ವಿಕಾಸ್ ಅಘಾಡಿಯ ಮೈತ್ರಿಕೂಟದ ಪಾಲುದಾರರು ಬಿಜೆಪಿ ಮತ್ತು ಅದರ ತಪ್ಪು ನೀತಿಗಳ ವಿರುದ್ಧ ವಜ್ರಮುತ್ ಅಭಿಯಾನವನ್ನು ಪ್ರಾರಂಭಿಸಿದ್ದು ಇತರ ರ್ಯಾಲಿಗಳು ನಾಗ್ಪುರ, ಪುಣೆ, ನಾಸಿಕ್ ಮತ್ತು ಕೊಲ್ಲಾಪುರದಲ್ಲಿ ನಡೆದವು. ಪ್ರಮುಖ ಚುನಾವಣೆಗಳಿಗೆ ಮುಂಚಿತವಾಗಿ ಮತದಾರರನ್ನು ತನ್ನ ವಿಭಿನ್ನ ಸೈದ್ಧಾಂತಿಕ ಅನುಸರಣೆಯನ್ನು ಕ್ರೋಢೀಕರಿಸಲು ಮತ್ತು MVA ಸರ್ಕಾರ ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಉತ್ತಮ ಕೆಲಸವನ್ನು ನೆನಪಿಸುವ ಮೂಲಕ ಜನರನ್ನು ಸಂಪರ್ಕಿಸಲು MVA ನಿರ್ಧರಿಸಿದೆ.