ಅನಿಲ್ ನಿರ್ಧಾರ ನೋವುಂಟು ಮಾಡಿದೆ, ಬಿಜೆಪಿ ಸೇರಿದ್ದು ದೊಡ್ಡ ತಪ್ಪು: ಎಕೆ ಆಂಟನಿ

ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರ್ಪಡೆಯಿಂದ ತಮಗೆ ಅತ್ಯಂತ ನೋವಾಗಿದೆ ಮತ್ತು ಇದು ದೊಡ್ಡ ತಪ್ಪು ನಿರ್ಧಾರ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಗುರುವಾರ ಹೇಳಿದ್ದಾರೆ.
ಎ. ಕೆ. ಆಂಟನಿ
ಎ. ಕೆ. ಆಂಟನಿ

ತಿರುವನಂತಪುರ: ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರ್ಪಡೆಯಿಂದ ತಮಗೆ ಅತ್ಯಂತ ನೋವಾಗಿದೆ ಮತ್ತು ಇದು ದೊಡ್ಡ ತಪ್ಪು ನಿರ್ಧಾರ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಗುರುವಾರ ಹೇಳಿದ್ದಾರೆ.

ಪುತ್ರ ಬಿಜೆಪಿ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಂಟನಿ, ನಾನು ನನ್ನ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಜೊತೆ ನಿಲ್ಲುತ್ತೇನೆ ಎಂದು ಹೇಳಿದರು ಮತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತದ ದಿನಗಳನ್ನು ನೆನಪಿಸಿಕೊಂಡರು.

ಅನಿಲ್ ನಿರ್ಧಾರವು ನಿಜವಾಗಿಯೂ ನೋವುಂಟು ಮಾಡಿದೆ. ಆದರೆ ಸಾಯುವವರೆಗೂ ನಾನು ಕಾಂಗ್ರೆಸ್ಸಿಗನಾಗಿರುತ್ತೇನೆ ಎಂದಿದ್ದಾರೆ.

ಏಕತೆ ಮತ್ತು ಧಾರ್ಮಿಕ ಸಾಮರಸ್ಯ ಭಾರತದ ಶಕ್ತಿ. ಆದರೆ 2014 ರ ನಂತರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರು ವ್ಯವಸ್ಥಿತವಾಗಿ ವಿವಿಧತೆಯನ್ನು ದುರ್ಬಲಗೊಳಿಸುತ್ತಿದ್ದಾರೆ. ಬಿಜೆಪಿ ಏಕರೂಪತೆಯನ್ನು ಮಾತ್ರ ನಂಬುತ್ತದೆ, ಅವರು ದೇಶದ ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಬಿಜೆಪಿ ಸೇರಿದ ಅನಿಲ್ ಕೆ ಆಂಟನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಅವರು ತಮ್ಮ ತಂದೆ ಮತ್ತು ಪಕ್ಷದ ಹಿರಿಯ ನಾಯಕ ಎ ಕೆ ಆಂಟನಿ ಅವರಿಗೆ ದ್ರೋಹ ಮಾಡಿದ್ದಾರೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com