ಹಿಂಡರ್ಬರ್ಗ್ ವಿವಾದದಲ್ಲಿ ಅದಾನಿ ಬೆನ್ನಿಗೆ ನಿಂತ ಪವಾರ್: ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ....

ಉದ್ಯಮಿ ಅದಾನಿ ಸಮೂಹದ ಸಂಸ್ಥೆಗಳನ್ನು ಅಮೇರಿಕಾ ಮೂಲದ ಶಾರ್ಟ್ ಸೆಲ್ಲರ್ ಹಿಂಡರ್ಬರ್ಗ್ ಟಾರ್ಗೆಟ್ ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ಎನ್ ಸಿಪಿ ವರಿಷ್ಠ ಶರದ್ ಪವಾರ್,  ಅದಾನಿ ಸಮೂಹದ ಬೆನ್ನಿಗೆ ನಿಂತಿದ್ದಾರೆ. 
ಶರದ್ ಪವಾರ್
ಶರದ್ ಪವಾರ್

ನವದೆಹಲಿ: ಉದ್ಯಮಿ ಅದಾನಿ ಸಮೂಹದ ಸಂಸ್ಥೆಗಳನ್ನು ಅಮೇರಿಕಾ ಮೂಲದ ಶಾರ್ಟ್ ಸೆಲ್ಲರ್ ಹಿಂಡರ್ಬರ್ಗ್ ಟಾರ್ಗೆಟ್ ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ಎನ್ ಸಿಪಿ ವರಿಷ್ಠ ಶರದ್ ಪವಾರ್,  ಅದಾನಿ ಸಮೂಹದ ಬೆನ್ನಿಗೆ ನಿಂತಿದ್ದಾರೆ. 

ಎನ್ ಡಿಟಿವಿ ಗೆ ಸಂದರ್ಶನ ನೀಡಿರುವ ಶರದ್ ಪವಾರ್, ಅದಾನಿ ಸಮೂಹದ ಬಗ್ಗೆ ಹಿಂಡರ್ಬರ್ಗ್ ಸಂಶೋಧನಾ ವರದಿಯನ್ನು ಟೀಕಿಸಿದ್ದಾರೆ.

ವ್ಯಕ್ತಿಗಳಿಂದ ಈ ಬಗ್ಗೆ ಬಂದ ಹೇಳಿಕೆಗಳು ತೀರಾ ಬೇಗ ಬಂದ ಹೇಳಿಕೆಗಳಾಗಿದ್ದವು, ಇದೇ ವಿಷಯವಾಗಿ ಸಂಸತ್ ನಲ್ಲಿ ಗದ್ದಲ ಉಂಟಾಗಿತ್ತು. ಈ ಬಾರಿಯ ಗದ್ದಲ ಉಂಟಾಗಿದ್ದ ವಿಷಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಲಾಯಿತು. ಈ ವಿಷಯವನ್ನು ಜೀವಂತವಾಗಿಟ್ಟು ಹೇಳಿಕೆ ನೀಡಿದ್ದ ವ್ಯಕ್ತಿಗಳು ಹಿಂದೆಂದೂ ಹೇಳಿಕೆಗಳನ್ನು ನೀಡಿದ್ದು ಕೇಳಿಲ್ಲ.  ದೇಶಾದ್ಯಂತ ಗದ್ದಲ ಉಂಟುಮಾಡುವ ವಿಷಯಗಳನ್ನು ಪ್ರಸ್ತಾಪಿಸಿದಾಗ, ದೇಶದ ಆರ್ಥಿಕತೆ ಮೇಲೆ ಹೊರೆ ಬೀಳುತ್ತದೆ.  ಈ ಅಂಶಗಳನ್ನು ನಾವು ನಿರ್ಲಕ್ಷ್ಯಿಸುವುದಕ್ಕೆ ಸಾಧ್ಯವಿಲ್ಲ. ಬಹುಶಃ ಇದೇ ಟಾರ್ಗೆಟ್ ಆಗಿರಬಹುದು ಎಂದು ಪವಾರ್ ಹೇಳಿದ್ದಾರೆ.

ಶರದ್ ಪವಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ಮಿತ್ರ ಪಕ್ಷ ಕಾಂಗ್ರೆಸ್, ಮಿತ್ರ ಪಕ್ಷ ಎನ್ ಸಿಪಿ ಈ ವಿಷಯದಲ್ಲಿ ತನ್ನದೇ ಆದ ನಿಲುವುಗಳನ್ನು ಹೊಂದಿರಬಹುದು. ಆದರೆ 19 ಸಮಾನ ಮನಸ್ಕ ವಿಪಕ್ಷಗಳಿಗೆ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಮನವರಿಕೆಯಾಗಿದೆ ಎಂದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com