ಅಮಿತ್ ಶಾ
ದೇಶ
ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ: ಚೀನಾ ಆಕ್ಷೇಪ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿ ಕೈಗೊಂಡಿರುವುದನ್ನುಚೀನಾ ತೀವ್ರವಾಗಿ ವಿರೋಧಿಸಿದೆ. ಈ ಪ್ರದೇಶದಲ್ಲಿನ ಅಧಿಕೃತ ಚಟುವಟಿಕೆಗಳು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇಟಾನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿ ಕೈಗೊಂಡಿರುವುದನ್ನುಚೀನಾ ತೀವ್ರವಾಗಿ ವಿರೋಧಿಸಿದೆ. ಈ ಪ್ರದೇಶದಲ್ಲಿನ ಅಧಿಕೃತ ಚಟುವಟಿಕೆಗಳು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಅರುಣಾಚಲ ಪ್ರದೇಶದಲ್ಲಿನ ಕೆಲವೊಂದು ಸ್ಥಳಗಳ ಹೆಸರನ್ನು ಚೀನಾ ಬದಲಿಸಿದ್ದು, ಈ ಪ್ರದೇಶ ತನ್ನ "ಸಾರ್ವಭೌಮತ್ವ" ಎಂದು ಹೇಳಿಕೊಂಡಿದೆ. ಈ ಮಧ್ಯೆ ಅರುಣಾಚಲ ಪ್ರದೇಶಕ್ಕೆ ಇಂದಿನಿಂದ ಎರಡು ದಿನ ಭೇಟಿ ನೀಡಿರುವ ಅಮಿತ್ ಶಾ, ಕಿಬಿತೊ ಗ್ರಾಮದಲ್ಲಿ 9 ಮಿನಿ ಜಲ ವಿದ್ಯುತ್ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಜ್ವಾ ಜಿಲ್ಲೆಯ ಕಿಬಿತೋದಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಶಾ ಸಂವಾದ ನಡೆಸಲಿದ್ದು, ಮಂಗಳವಾರ ವಲಾಂಗ್ ಹುತಾತ್ಮರ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ