ಸಂವಿಧಾನ ರಕ್ಷಣೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈಜೋಡಿಸಲಿದೆ: ಸೋನಿಯಾ ಗಾಂಧಿ

ನರೇಂದ್ರ ಮೋದಿ ಸರ್ಕಾರ ಪ್ರತಿಯೊಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಚುನಾವಣೆ ಸಮೀಪಿಸುತ್ತಿರುವ ಹಲವು ಪ್ರಮುಖ ರಾಜ್ಯಗಳಲ್ಲಿ ತಮ್ಮ ಪಕ್ಷ ಈ ಸಂದೇಶವನ್ನು ನೇರವಾಗಿ ಜನರಿಗೆ ತಲುಪಿಸುತ್ತದೆ...
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಪ್ರತಿಯೊಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಚುನಾವಣೆ ಸಮೀಪಿಸುತ್ತಿರುವ ಹಲವು ಪ್ರಮುಖ ರಾಜ್ಯಗಳಲ್ಲಿ ತಮ್ಮ ಪಕ್ಷ ಈ ಸಂದೇಶವನ್ನು ನೇರವಾಗಿ ಜನರಿಗೆ ತಲುಪಿಸುತ್ತದೆ ಮತ್ತು ಸಂವಿಧಾನ ರಕ್ಷಣೆಗಾಗಿ ಸಮಾನ ಮನಸ್ಕ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಹೇಳಿದ್ದಾರೆ.

"ದಿ ಹಿಂದೂ"ಗೆ ಬರೆದ ಲೇಖನದಲ್ಲಿ ಸೋನಿ ಗಾಂಧಿಯವರು, ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು "ವ್ಯವಸ್ಥಿತವಾಗಿ ಹಾನಿಗೊಳಿಸುತ್ತಿದೆ" ಎಂದು ಆರೋಪಿಸಿದ್ದಾರೆ. ಅವರ ಕ್ರಮಗಳು ಪ್ರಜಾಪ್ರಭುತ್ವದ ಬಗ್ಗೆ "ಆಳವಾಗಿ ಬೇರೂರಿರುವ ತಿರಸ್ಕಾರ" ವನ್ನು ಪ್ರದರ್ಶಿಸುತ್ತಿವೆ ಎಂದಿದ್ದಾರೆ.

ಬಿಜೆಪಿ ಮತ್ತು ಆರ್ ಎಸ್ಎಸ್ ನಾಯಕರಿಂದ ಹೆಚ್ಚುತ್ತಿರುವ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಧಾನಿ ಮೋದಿ ನಿರ್ಲಕ್ಷಿಸಿದ್ದಾರೆ. ಅವರು ಒಮ್ಮೆಯೂ ಶಾಂತಿ ಅಥವಾ ಸೌಹಾರ್ದತೆಗಾಗಿ ಕರೆ ನೀಡಿಲ್ಲ ಅಥವಾ ಅಪರಾಧಿಗಳಿಗೆ ಶಿಕ್ಷೆಯಾಗಲು ಅವರು ಅವಕಾಶ ನೀಡಿಲ್ಲ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ದೂರಿದ್ದಾರೆ.

"ಧಾರ್ಮಿಕ ಹಬ್ಬಗಳು ಇತರರನ್ನು ಬೆದರಿಸುವ ಸಂದರ್ಭಗಳಾಗಿ ಕಂಡುಬರುತ್ತಿವೆ. ಅವು ಸಂತೋಷ ಮತ್ತು ಆಚರಣೆಯ ಸಂದರ್ಭಗಳಾಗಿ ಉಳಿದಿಲ್ಲ. ಬದಲಿಗೆ, ಅವರ ಧರ್ಮ, ಆಹಾರ, ಜಾತಿ, ಲಿಂಗ ಅಥವಾ ಭಾಷೆಯ ಕಾರಣದಿಂದಾಗಿ ಬೆದರಿಕೆ ಮತ್ತು ತಾರತಮ್ಯವನ್ನು ಹಟ್ಟು ಹಾಕಲಾಗುತ್ತಿದೆ" ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಪ್ರಜಾಪ್ರಭುತ್ವಕ್ಕೆ ಮುಂದಿನ ಕೆಲವು ತಿಂಗಳು ಅತ್ಯಂತ ನಿರ್ಣಾಯಕ ಎಂದಿರುವ ಕಾಂಗ್ರೆಸ್ ಸಂಸದೀಯ ಮಂಡಳಿಯ ಅಧ್ಯಕ್ಷೆ, ಮೋದಿ ಸರ್ಕಾರ "ಎಲ್ಲಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com