ಪಂಜಾಬ್ ನ ಬಟಿಂಡಾ ಸೇನಾ ನೆಲೆ ಮೇಲೆ ಗುಂಡಿನ ದಾಳಿ: ನಾಲ್ವರ ಸಾವು; ಭಯೋತ್ಪಾದಕ ದಾಳಿಯಲ್ಲ ಎಂದ ಪೊಲೀಸರು

ಪಂಜಾಬ್ ನ  ಬಟಿಂಡಾ ಮಿಲಿಟರಿ ಸ್ಟೇಶನ್ ನಲ್ಲಿ ಬುಧವಾರ ಮುಂಜಾನೆ  ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಟಿಂಡಾ ಸೇನಾ
ಬಟಿಂಡಾ ಸೇನಾ

ಬಟಿಂಡಾ: ಪಂಜಾಬ್ ನ  ಬಟಿಂಡಾ ಮಿಲಿಟರಿ ಸ್ಟೇಶನ್ ನಲ್ಲಿ ಬುಧವಾರ ಮುಂಜಾನೆ  ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಟಿಂಡಾ ಮಿಲಿಟರಿ ಠಾಣೆಯೊಳಗೆ ಮುಂಜಾನೆ 04:35 ರ ಸುಮಾರಿಗೆ ಗುಂಡಿನ ದಾಳಿಯ ಘಟನೆ ವರದಿಯಾಗಿದೆ.  ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಚಲನವಲನವನ್ನು ನಿರ್ಬಂಧಿಸಲಾಗಿದೆ. .

ಎಸ್‌ಎಸ್‌ಪಿ ಬಟಿಂಡಾ ಪ್ರಕಾರ, "ಈ  ಘಟನೆಯು ಭಯೋತ್ಪಾದಕ ದಾಳಿಯಲ್ಲ". ಇದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿಲ್ಲ. ಇದು ವೈಯಕ್ತಿಕ ಹತ್ಯೆಯ ಪ್ರಕರಣದಂತೆ ಕಾಣುತ್ತಿದೆ'' ಎಂದುಪಂಜಾಬ್ ಪೊಲೀಸ್ ಹಾಗೂ  ಗುಪ್ತಚರ ಮೂಲಗಳು ತಿಳಿಸಿವೆ.  

ಬಟಿಂಡಾ ಮಿಲಿಟರಿ ಠಾಣೆಯ ಫಿರಂಗಿ ಘಟಕದಲ್ಲಿ ಈ  ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಕುಟುಂಬಗಳು ಸಹ ವಾಸಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಬಟಿಂಡಾ ಕಂಟೋನ್ಮೆಂಟ್‌ನೊಳಗೆ ಪೊಲೀಸರಿಗೆ ಕೂಡ ಪ್ರವೇಶಿಸಲು ಅನುಮತಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ 4.35ರ ಹೊತ್ತಿಗೆ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ ನಡೆದಿದೆ. ಪ್ರದೇಶದ ಒಳಗೆ ಯಾರೋ ಅಪರಿಚಿತರು ಪ್ರವೇಶ ಮಾಡಿದ್ದನ್ನು ಅರಿತ ಕೂಡಲೇ ತುರ್ತು ಪ್ರತಿರೋಧ ತಂಡಗಳು ಕಾರ್ಯಾಚರಣೆಗೆ ಇಳಿದವು. ಶೋಧ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿವೆ ಎಂದು ಸೇನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com