ಬಿಜೆಪಿ-ಆರ್ ಎಸ್ಎಸ್ ತಪ್ಪು ಹೇಳುತ್ತಿವೆ, ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ ಕುಸಿಯುತ್ತಿದೆ: ದಿಗ್ವಿಜಯ್ ಸಿಂಗ್
ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಬಿಜೆಪಿ, ಆರ್ ಎಸ್ಎಸ್ ನ ವಾದಕ್ಕೆ ವಿರುದ್ಧವಾಗಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಕುಗ್ಗುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
Published: 13th April 2023 11:47 PM | Last Updated: 13th April 2023 11:47 PM | A+A A-

ದಿಗ್ವಿಜಯ್ ಸಿಂಗ್
ಭೋಪಾಲ್: ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಬಿಜೆಪಿ, ಆರ್ ಎಸ್ಎಸ್ ನ ವಾದಕ್ಕೆ ವಿರುದ್ಧವಾಗಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಕುಗ್ಗುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಹಿಂದೂಗಳಿಗೆ ಹೋಲಿಸಿದರೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಸಂಖ್ಯೆ ವೇಗವಾಗಿ ಕುಸಿಯುತ್ತಿದೆ ಇದನ್ನು ನಾನು ಸಾಬೀತುಪಡಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಸವಾಲು ಹಾಕಿದ್ದಾರೆ.
ಇನ್ನು ದಿಗ್ವಿಜಯ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆಡಳಿತಾರೂಢ ಬಿಜೆಪಿ ಪಕ್ಷ, ದಿಗ್ವಿಜಯ್ ಸಿಂಗ್ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ, ಸಮಾಜವನ್ನು ಒಡೆಯುವುದಕ್ಕೆ ತಪ್ಪು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ಮಧ್ಯಪ್ರದೇಶದ ಸಾಗರ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ, ದಿಗ್ವಿಜಯ್ ಸಿಂಗ್ ಜನಗಣತಿಯ ಬಗ್ಗೆ ಪಕ್ಷದ ನಿಲುವನ್ನು ತಿಳಿಸುತ್ತಾ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಬಿಜೆಪಿ, ಆರ್ ಎಸ್ಎಸ್ ನ ವಾದಕ್ಕೆ ವಿರುದ್ಧವಾಗಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಕುಗ್ಗುತ್ತಿದೆ ಇದನ್ನು ನಾನು ಸಾಬೀತು ಮಾಡಬಲ್ಲೆ ಎಂದು ಹೇಳಿದರು.
ಜಾತಿ ಆಧಾರಿತ ಜನಗಣತಿಯನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಕೇಳಿದ್ದಕ್ಕೆ, ನಿಯಮಗಳು ಮತ್ತು ಕಾನೂನಿನ ಪ್ರಕಾರ ಅದರ ಅಗತ್ಯವಿಲ್ಲ ಎಂದು ಸಿಂಗ್ ಹೇಳಿದರು.