ಫುಲ್ವಾಮಾ ದಾಳಿ: ತನಿಖೆ ಎಲ್ಲಿಗೆ ಬಂದು ತಲುಪಿದೆ? ಮಲ್ಲಿಕ್ ವರದಿ ಕುರಿತು ಪ್ರತಿಕ್ರಿಯಿಸುವಂತೆ ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ

2019ರ ಪುಲ್ವಾಮಾ ಘಟನೆಯಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಹತ್ಯೆಗೈದ ಪ್ರಕರಣದ ತನಿಖೆಯ ಫಲಿತಾಂಶ ಕುರಿತು ಕಾಂಗ್ರೆಸ್ ಶನಿವಾರ ಕೇಂದ್ರದಿಂದ ಉತ್ತರವನ್ನು ಕೇಳಿದೆ. ಉಗ್ರರ ದಾಳಿ ಬೆದರಿಕೆಯ ಹೊರತಾಗಿಯೂ ಸಿಆರ್‌ಪಿಎಫ್ ಸಿಬ್ಬಂದಿಗೆ ವಿಮಾನ ನಿರಾಕರಿಸಿ, ರಸ್ತೆ ಮೂಲಕ ಸಂಚರಿಸುವಂತೆ ಏಕೆ ಮಾಡಲಾಗಿತ್ತು ಎಂದು ಪ್ರಶ್ನಿಸಿದೆ.
ಪುಲ್ವಾಮಾ ದಾಳಿ, ಜೈರಾಮ್ ರಮೇಶ್ ಮತ್ತಿತರರು
ಪುಲ್ವಾಮಾ ದಾಳಿ, ಜೈರಾಮ್ ರಮೇಶ್ ಮತ್ತಿತರರು

ನವದೆಹಲಿ: 2019ರ ಪುಲ್ವಾಮಾ ಘಟನೆಯಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಹತ್ಯೆಗೈದ ಪ್ರಕರಣದ ತನಿಖೆಯ ಫಲಿತಾಂಶ ಕುರಿತು ಕಾಂಗ್ರೆಸ್ ಶನಿವಾರ ಕೇಂದ್ರದಿಂದ ಉತ್ತರವನ್ನು ಕೇಳಿದೆ. ಉಗ್ರರ ದಾಳಿ ಬೆದರಿಕೆಯ ಹೊರತಾಗಿಯೂ ಸಿಆರ್‌ಪಿಎಫ್ ಸಿಬ್ಬಂದಿಗೆ ವಿಮಾನ ನಿರಾಕರಿಸಿ, ರಸ್ತೆ ಮೂಲಕ ಸಂಚರಿಸುವಂತೆ ಏಕೆ ಮಾಡಲಾಗಿತ್ತು ಎಂದು ಪ್ರಶ್ನಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 'ಕನಿಷ್ಠ ಆಡಳಿತ ಮತ್ತು ಗರಿಷ್ಠ ಮೌನ' ಎಂದು ಆರೋಪಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಘಟನೆ ಕುರಿತು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವರದಿಯಲ್ಲಿನ ಮಾಹಿತಿ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದರು.

ಸರ್ಕಾರ  ಕನಿಷ್ಠ ಆಡಳಿತ ಮತ್ತು ಗರಿಷ್ಠ ಮೌನದ ತತ್ವದಲ್ಲಿ ನಂಬಿಕೆಯಿಟ್ಟಿದೆ. ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಕೇಳುವುದನ್ನು ಮುಂದುವರಿಸುತ್ತದೆ ಎಂದರು. 

ಪಕ್ಷದ ಮುಖಂಡರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರಿನಾಟೆ ಜೊತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್, ಸರ್ಕಾರ ಪ್ರಜಾಪ್ರಭುತ್ವದ ಸಂಕೇತಗಳಾಗಿ ಕಟ್ಟಡಗಳನ್ನು ಸ್ಥಾಪಿಸುತ್ತಿದೆ. ಆದರೆ ಪ್ರಜಾಪ್ರಭುತ್ವ ಕಾಣೆಯಾಗಿದೆ. "ಸಿಆರ್‌ಪಿಎಫ್ ಸಿಬ್ಬಂದಿಗೆ ವಿಮಾನ ಏಕೆ ನಿರಾಕರಿಸಲಾಯಿತು? ಅವರನ್ನು ಏಕೆ ಏರ್‌ಲಿಫ್ಟ್ ಮಾಡಲಿಲ್ಲ? ಎಂದು ಶ್ರೀನೇಟ್ ಕೇಳಿದರು.

ಜೈಶ್ ಬೆದರಿಕೆಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ಜನವರಿ 2 2019 ಮತ್ತು 13 ಫೆಬ್ರವರಿ 2019 ರ ನಡುವೆ ಭಯೋತ್ಪಾದಕ ದಾಳಿಯ ಎಚ್ಚರಿಕೆ ನೀಡಿದ್ದ 11 ಗುಪ್ತಚರ ಮಾಹಿತಿಗಳನ್ನು ಏಕೆ ನಿರ್ಲಕ್ಷಿಸಲಾಗಿದೆ. ಹೇಗೆ ಉಗ್ರರು 300 ಕೆಜಿ ಆರ್ ಡಿಎಕ್ಸ್ ಸಂಗ್ರಹಿಸಿದರು. ನಾಲ್ಕು ವರ್ಷಗಳ ಅವಧಿಯ ನಂತರ, ಪುಲ್ವಾಮಾ ಉಗ್ರ ದಾಳಿಯ ವಿಚಾರಣೆ ಎಲ್ಲಿಗೆ ತಲುಪಿದೆ? ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಮತ್ತು ಆಗಿನ ಗೃಹ ಸಚಿವ  ರಾಜನಾಥ್ ಸಿಂಗ್ ಅವರ ಹೊಣೆಗಾರಿಕೆಗೆ ಯಾರು, ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com