ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ್ದ ಟರ್ಕಿ ಮೇಕ್ ಪಿಸ್ತೂಲ್ ಅನ್ನೇ ಅತೀಕ್ ಅಹ್ಮದ್‌ ಹತ್ಯೆಗೆ ಬಳಸಿದ ಕೊಲೆಗಾರರು!

ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಬಳಸಲಾಗಿದ್ದ ಜಿಗಾನಾ ಮೇಡ್ ಪಿಸ್ತೂಲ್ ಅನ್ನೇ ಇಬ್ಬರೂ ಸಹೋದರ ಹತ್ಯೆಗೆ ಬಳಸಲಾಗಿದೆ. ಜಿಗಾನಾ ಮೇಡ್ ಪಿಸ್ತೂಲ್ ಅನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತದೆ.
ಅತೀಕ್ ಸಹೋದರರ ಕೊಲೆ
ಅತೀಕ್ ಸಹೋದರರ ಕೊಲೆ
Updated on

ಲಖನೌ: ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಬಳಸಲಾಗಿದ್ದ ಜಿಗಾನಾ ಮೇಡ್ ಪಿಸ್ತೂಲ್ ಅನ್ನೇ ಇಬ್ಬರೂ ಸಹೋದರ ಹತ್ಯೆಗೆ ಬಳಸಲಾಗಿದೆ. ಜಿಗಾನಾ ಮೇಡ್ ಪಿಸ್ತೂಲ್ ಅನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತದೆ.

ಗುಂಡಿನ ದಾಳಿ ನಡೆಸಿದ್ದ ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂಬ ಮೂವರು ದಾಳಿಕೋರರನ್ನು ಬಂಧಿಸಿದ್ದು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಮತ್ತು 307(ಕೊಲೆಗೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 7, 25 ಮತ್ತು 27ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಪಿಸ್ತೂಲ್ ಅನ್ನು ಭಾರತದಲ್ಲಿ ಮಾರಾಟ ಮಾಡುವುದಿಲ್ಲ. ಇದಕ್ಕೆ ಪರವಾನಗಿಯು ಸಿಗುವುದಿಲ್ಲ. ಈ ಟರ್ಕಿ ನಿರ್ಮಿತ ಪಿಸ್ತೂಲ್ ಅನ್ನು ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ತರಲಾಗುತ್ತದೆ. ಮೂಲಗಳ ಪ್ರಕಾರ, ಇದು ಪಾಕಿಸ್ತಾನದ ಮೂಲಕ ಭಾರತಕ್ಕೆ ಪೂರೈಕೆಯಾಗುತ್ತದೆ ಮತ್ತು ಇದು ಡ್ರೋನ್‌ಗಳ ಮೂಲಕ ಗಡಿಯಾಚೆಯಿಂದ ಪೂರೈಕೆಯಾಗುತ್ತದೆ.

ಈ ಪಿಸ್ತೂಲಿನ ಬೆಲೆ ಸುಮಾರು 4 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ಸ್ವಯಂಚಾಲಿತ ಪಿಸ್ತೂಲ್ ಆಗಿದೆ. ಅದರ ಟ್ರಿಗರ್ ಒಂದು ಸಲ ಏಳೆದರೇ ಪಿಸ್ತೂಲ್ ನಲ್ಲಿ ಇರುವ ಎಲ್ಲಾ ಬುಲೆಟ್ ಗಳು ಖಾಲಿಯಾಗುತ್ತದೆ. ಇದೇ ಕಾರಣಕ್ಕೆ ಅತೀಕ್ ಹಾಗೂ ಆತನ ಸಹೋದರನ ಹತ್ಯೆಗೆ ಈ ಪಿಸ್ತೂಲ್ ಬಳಸಲಾಗಿದೆ.

ದಾಳಿಕೋರರು ಕಣ್ಣು ಮಿಟುಕಿಸುವ ಅವಕಾಶವನ್ನೂ ನೀಡಲಿಲ್ಲ
ಶನಿವಾರದಂದು ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಯಿಂದ ಹೊರಗೆ ಕರೆತರುತ್ತಿದ್ದಾಗ ಅತೀಕ್ ಮತ್ತು ಆತನ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಾಗ ಮೂವರು ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಸಹೋದರರಿಬ್ಬರನ್ನೂ ಕೊಂದಿದ್ದಾರೆ. ಇಡೀ ಘಟನೆಯಲ್ಲಿ ಆರೋಪಿಯ ಕಡೆಯಿಂದ 18 ಸುತ್ತಿನ ಗುಂಡಿನ ದಾಳಿ ನಡೆದಿದೆ. ಘಟನೆ ನಡೆದ ತಕ್ಷಣ ದಾಳಿಕೋರರು ಪೊಲೀಸರಿಗೆ ಶರಣಾಗಿದ್ದಾರೆ.

ಮಗ ಅಸದ್ ಒಂದು ದಿನದ ಹಿಂದಷ್ಟೇ ಎನ್ ಕೌಂಟರ್ ಗೆ ಬಲಿಯಾಗಿದ್ದ
ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಅಹ್ಮದ್ ನನ್ನು ಒಂದು ದಿನದ ಹಿಂದೆ ಎನ್ ಕೌಂಟರ್ ನಲ್ಲಿ ಹತನಾಗಿದ್ದನು. ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯುಪಿ ಎಸ್‌ಟಿಎಫ್‌ ಅಸಾದ್‌ನನ್ನು ಹತ್ಯೆ ಮಾಡಿತ್ತು. ಅಸ್ಸಾದ್ ಜೊತೆಗೆ ಆತನ ಒಬ್ಬ ಶೂಟರ್ ಗುಲಾಬ್ ಕೂಡ ಎನ್‌ಕೌಂಟರ್‌ನಲ್ಲಿ ಹತನಾಗಿದ್ದನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com