"ನನ್ನನ್ನು ಹತ್ಯೆ ಮಾಡಿದರೆ...": ಅತೀಕ್ ಅಹ್ಮದ್ ಪತ್ರ ಮುಚ್ಚಿದ ಲಕೋಟೆಯಲ್ಲಿ ಯುಪಿ ಸಿಎಂ, ಸಿಜೆಐ ಗೆ ರವಾನೆ

ಜೀವಕ್ಕೆ ಅಪಾಯ ಎದುರಾಗುವ ಆತಂಕ ಎದುರಿಸುತ್ತಿದ್ದ ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಮುಂದೊಂದು ದಿನ ತನಗೆ ಎದುರಾಗಬಹುದಾದ ಪರಿಸ್ಥಿಯ ಬಗ್ಗೆ ಬರೆದ ಪತ್ರವನ್ನು ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸಿಜೆಐ ಗೆ ಮುಚ್ಚಿದ ಲಕೋಟೆಯಲ್ಲಿ ಕಳಿಸಲಾಗುತ್ತಿದೆ.
ಅತೀಕ್ ಅಹ್ಮದ್- ಯುಪಿ ಸಿಎಂ ಯೋಗಿ ಆದಿತ್ಯನಾಥ್
ಅತೀಕ್ ಅಹ್ಮದ್- ಯುಪಿ ಸಿಎಂ ಯೋಗಿ ಆದಿತ್ಯನಾಥ್

ಪ್ರಯಾಗ್ ರಾಜ್: ಜೀವಕ್ಕೆ ಅಪಾಯ ಎದುರಾಗುವ ಆತಂಕ ಎದುರಿಸುತ್ತಿದ್ದ ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಬರೆದ ಪತ್ರವನ್ನು ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸಿಜೆಐ ಗೆ ಮುಚ್ಚಿದ ಲಕೋಟೆಯಲ್ಲಿ ಕಳಿಸಲಾಗುತ್ತಿದೆ.
 
ಪತ್ರವನ್ನು ರವಾನಿಸುತ್ತಿರುವುದರ ಬಗ್ಗೆ ಅತೀಕ್ ಅಹ್ಮದ್ ಅವರ ವಕೀಲರು ಮಾಹಿತಿ ನೀಡಿದ್ದು, "ಮುಚ್ಚಿದ ಲಕೋಟೆಯಲ್ಲಿ ಕಳಿಸಲಾಗುತ್ತಿರುವ ಪತ್ರ ನನ್ನ ಬಳಿ ಇಲ್ಲ, ಅದನ್ನು ನಾನು ಕಳಿಸುತ್ತಿಲ್ಲ. ಅತೀಕ್ ಅಹ್ಮದ್ ಬರೆದಿದ್ದ ಪತ್ರವನ್ನು ಬೇರೆಡೆ ಇಡಲಾಗಿದೆ ಹಾಗೂ ಮತ್ತೊಬ್ಬರು ಕಳಿಸುತ್ತಿದ್ದಾರೆ. ಪತ್ರದಲ್ಲಿರುವ ಅಂಶಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿಜಯ್ ಮಿಶ್ರಾ ಹೇಳಿದ್ದಾರೆ. 

ಬಂಧನಕ್ಕೊಳಗಾಗಿದ್ದ ಅತೀಕ್ ಅಹ್ಮದ್ ಹಾಗೂ ಆತನ ಕಿರಿಯ ಸಹೋದರನನ್ನು ವೈದ್ಯಕೀಯ ತಪಾಸಣೆಗಾಗಿ ಪ್ರಯಾಗ್ ರಾಜ್ ನ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ವಾಪಸ್ಸಾಗುತ್ತಿರಬೇಕಾದರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಅತೀಕ್ ಅಹ್ಮದ್ ಹಾಗೂ ಅಶ್ರಫ್ ನ್ನು ಪತ್ರಕರ್ತರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಅತೀಕ್ ಅಹ್ಮದ್ ಒಂದು ವೇಳೆ ತನಗೆ ಏನಾದರೂ ದುರ್ಘಟನೆ ಸಂಭವಿಸಿ, ಹತ್ಯೆಯಾದರೆ ಈ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಯುಪಿ ಸಿಎಂ ಹಾಗೂ ಸಿಜೆಐ ಗೆ ಕಳಿಸಬೇಕೆಂದು ಸೂಚಿಸಿದ್ದರು ಎಂದು ವಕೀಲ ಮಿಶ್ರ ತಿಳಿಸಿದ್ದಾರೆ. 
 
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ತನ್ನನ್ನು ಹಾಗೂ ತನ್ನ ಕುಟುಂಬದವರನ್ನು ವಿನಾಕಾರಣ ಸಿಲುಕಿಸಲಾಗಿದೆ. ಆದ್ದರಿಂದ ತಮಗೆ ಉತ್ತರ ಪ್ರದೇಶ ಪೊಲೀಸರಿಂದ ನಕಲಿ ಎನ್ ಕೌಂಟರ್ ನ ಭಯ ಕಾಡುತ್ತಿದೆ ಎಂದು ಆರೋಪಿಸಿ ಅತೀಕ್ ಅಹ್ಮದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com