ಕೋರ್ಸ್ ಗಳು ಆಂಗ್ಲ ಮಾಧ್ಯಮದಲ್ಲಿದ್ದರೂ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ: ವಿವಿಗಳಿಗೆ ಯುಜಿಸಿ
ಯಾವುದೇ ಕೋರ್ಸ್ ಗಳು ಆಂಗ್ಲ ಮಾಧ್ಯಮದಲ್ಲಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಬೇಕೆಂದು ವಿಶ್ವವಿದ್ಯಾಲಯಗಳಿಗೆ ಯುಜಿಸಿ ಸೂಚನೆ ನೀಡಿದೆ.
Published: 19th April 2023 03:36 PM | Last Updated: 19th April 2023 07:37 PM | A+A A-

ಯುಜಿಸಿ (ಸಂಗ್ರಹ ಚಿತ್ರ)
ನವದೆಹಲಿ: ಯಾವುದೇ ಕೋರ್ಸ್ ಗಳು ಆಂಗ್ಲ ಮಾಧ್ಯಮದಲ್ಲಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಬೇಕೆಂದು ವಿಶ್ವವಿದ್ಯಾಲಯಗಳಿಗೆ ಯುಜಿಸಿ ಸೂಚನೆ ನೀಡಿದೆ.
ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಪ್ರಕಾರ, ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸುವುದಕ್ಕೆ ಹಾಗೂ ಮಾತೃಭಾಷೆ/ಸ್ಥಳೀಯ ಭಾಷೆಗಳಲ್ಲಿ ಬೋಧನೆ-ಕಲಿಕೆ ಪ್ರಕ್ರಿಯೆಯನ್ನು ಬೆಂಬಲಿಸುವುದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಯುಜಿಸಿ ಹೇಳಿದೆ.
"ಮಾತೃಭಾಷೆ/ಸ್ಥಳೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯುವುದು ಮತ್ತು ಇತರ ಭಾಷೆಗಳಿಂದ ಪ್ರಮಾಣಿತ ಪುಸ್ತಕಗಳನ್ನು ಭಾಷಾಂತರಿಸುವುದು ಸೇರಿದಂತೆ ಬೋಧನೆಯಲ್ಲಿ ಅವುಗಳ ಬಳಕೆ ಮಾಡುವಂತಹ ಉಪಕ್ರಮಗಳನ್ನು ಉತ್ತೇಜಿಸುವುದು ಅಗತ್ಯವಾಗಿದ್ದು, ನಿಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಕೋರ್ಸ್ ಗಳನ್ನು ವ್ಯಾಸಂಗ ಮಾಡಿದ್ದರೂ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಉತ್ತರಗಳನ್ನು ಬರೆಯಲು ಅವಕಾಶ ನೀಡಬೇಕು ಎಂದು ಹೇಳಿದೆ. ಅಷ್ಟೇ ಅಲ್ಲದೇ ಸ್ಥಳೀಯ ಭಾಷೆಗಳಲ್ಲಿ ಮೂಲ ಬರವಣಿಗೆಯ ಅನುವಾದವನ್ನು ಉತ್ತೇಜಿಸಬೇಕು ಮತ್ತು ಬೋಧನೆ-ಕಲಿಕೆಯಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕೆಂದು ಆಯೋಗವು ವಿನಂತಿಸುತ್ತದೆ ಎಂದು ವಿವಿಗಳಿಗೆ ಯುಜಿಸಿ ಹೇಳಿದೆ.