ಉತ್ತರಾಖಂಡ: ಕೇದಾರನಾಥದಲ್ಲಿ ಹೆಲಿಕಾಪ್ಟರ್ ರೋಟರ್ ಬ್ಲೇಡ್‌ಗೆ ತಗುಲಿ ಅಧಿಕಾರಿ ಸಾವು
ಉತ್ತರಾಖಂಡದ ಕೇದಾರನಾಥದಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳಿಗೆ ಸಿಲುಕಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 23rd April 2023 06:28 PM | Last Updated: 23rd April 2023 06:28 PM | A+A A-

ಕೇದಾರನಾಥ ದೇವಾಲಯ
ಕೇದಾರನಾಥ: ಉತ್ತರಾಖಂಡದ ಕೇದಾರನಾಥದಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳಿಗೆ ಸಿಲುಕಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತರು ಕೇದಾರನಾಥ ಧಾಮದಲ್ಲಿ ಹೆಲಿಕಾಪ್ಟರ್ ಅನ್ನು ನಿರ್ವಹಿಸುವ ಕಂಪನಿಯ ಅಧಿಕಾರಿಯಾಗಿದ್ದರು.
ಇಂದು ಮಧ್ಯಾಹ್ನ 2.15 ರ ಸುಮಾರಿಗೆ ಸರ್ಕಾರಿ ಸ್ವಾಮ್ಯದ ಗರ್ವಾಲ್ ಮಂಡಲ್ ವಿಕಾಸ್ ನಿಗಮ್ ಲಿಮಿಟೆಡ್‌ನ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ: ಏಪ್ರಿಲ್ 25 ರಂದು ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಿದೆ
ಪ್ರಯಾಣದ ವ್ಯವಸ್ಥೆ ಪರಿಶೀಲಿಸಲು ತೆರಳಿದ್ದ ವೇಳೆ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳ ವ್ಯಾಪ್ತಿಯಲ್ಲಿ ಅಧಿಕಾರಿ ಬಂದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರುದ್ರಪ್ರಯಾಗ ಎಸ್‌ಪಿ ವಿಶಾಖ ಅಶೋಕ್ ತಿಳಿಸಿದ್ದಾರೆ.
ಶನಿವಾರ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಚಾರ್ ಧಾಮ್ ಯಾತ್ರೆ ಆರಂಭವಾದ ಒಂದು ದಿನದ ನಂತರ ಈ ದುರ್ಘಟನೆ ಸಂಭವಿಸಿದೆ.