ಅದಾನಿ, ಚೀನಾ ಬಗ್ಗೆ 'ಮೌನ್ ಕಿ ಬಾತ್': ಮೋದಿ 100ನೇ 'ಮನ್ ಕಿ ಬಾತ್'ಗೆ ಕಾಂಗ್ರೆಸ್ ಟಾಂಗ್
ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಭಾಷಣ 'ಮನ್ ಕಿ ಬಾತ್' ನ 100ನೇ ಸಂಚಿಕೆಗಾಗಿ ಅವರ ಸಾರ್ವಜನಿಕ ಸಂಪರ್ಕ ಯಂತ್ರವು "ಹೆಚ್ಚುವರಿ ಕೆಲಸ ಮಾಡುತ್ತಿದೆ". ಆದರೆ ಅದಾನಿ ಮತ್ತು ಚೀನಾದಂತಹ ನಿರ್ಣಾಯಕ ವಿಷಯಗಳ...
Published: 25th April 2023 11:29 AM | Last Updated: 25th April 2023 02:47 PM | A+A A-

ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಭಾಷಣ 'ಮನ್ ಕಿ ಬಾತ್' ನ 100ನೇ ಸಂಚಿಕೆಗಾಗಿ ಅವರ ಸಾರ್ವಜನಿಕ ಸಂಪರ್ಕ ಯಂತ್ರವು "ಹೆಚ್ಚುವರಿ ಕೆಲಸ ಮಾಡುತ್ತಿದೆ". ಆದರೆ ಅದಾನಿ ಮತ್ತು ಚೀನಾದಂತಹ ನಿರ್ಣಾಯಕ ವಿಷಯಗಳ ಬಗ್ಗೆ ಮೌನವಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
'ಮನ್ ಕಿ ಬಾತ್'ನ 100ನೇ ಆವೃತ್ತಿಯು ಮುಂದಿನ ಭಾನುವಾರ ಪ್ರಸಾರವಾಗಲು ಸಿದ್ಧವಾಗಿದೆ. ಮಾಸಿಕ ರೇಡಿಯೊ ಭಾಷಣದ ಈ ಯಶಸ್ಸಿಗೆ ಸಾರ್ವಜನಿಕ ಬೆಂಬಲ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ರೋಹ್ಟಕ್‌ನ ಸಮೀಕ್ಷೆಯ ಪ್ರಕಾರ, ಸುಮಾರು 23 ಕೋಟಿ ಜನರು ಪ್ರತಿ ತಿಂಗಳ ಕೊನೆಯ ಭಾನುವಾರದಂದು 'ಮನ್ ಕಿ ಬಾತ್' ಕಾರ್ಯಕ್ರಮ ಆಲಿಸುತ್ತಾರೆ ಮತ್ತು 65 ಪ್ರತಿಶತ ಕೇಳುಗರು ಹಿಂದಿಯಲ್ಲಿ ಭಾಷಣವನ್ನು ಕೇಳಲು ಬಯಸುತ್ತಾರೆ ಎಂದು ಹೇಳಿದೆ.
ಇದನ್ನು ಓದಿ: ಅಧಿಕಾರ ತ್ಯಜಿಸಿದ ನಂತರ ಪುಲ್ವಾಮಾ ದಾಳಿ ಪ್ರಶ್ನಿಸುತ್ತಿಲ್ಲ, ಅಂದೇ ಹೇಳಿದ್ದೆ: ಸತ್ಯಪಾಲ್ ಮಲಿಕ್
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಜೈರಾಮ್ ರಮೇಶ್ ಅವರು, "ಪ್ರಧಾನಿ ಅವರ ಪ್ರಬಲ ಪಿಆರ್ ಯಂತ್ರ ಏಪ್ರಿಲ್ 30 ರಂದು 100ನೇ 'ಮನ್ ಕಿ ಬಾತ್' ಪ್ರಸಾರ ಮಾಡಲು ಹೆಚ್ಚಿನ ಸಮಯ ಕೆಲಸ ಮಾಡುತ್ತಿದೆ. ಏತನ್ಮಧ್ಯೆ, ಇದು ಅದಾನಿ, ಚೀನಾ, ಸತ್ಯಪಾಲ್ ಮಲಿಕ್ ಬಹಿರಂಗಪಡಿಸಿದ ಪುಲ್ವಾಮಾ ದಾಳಿ, ಎಂಎಸ್‌ಎಂಇಗಳ ನಾಶ ಮತ್ತು ಇತರ ನಿರ್ಣಾಯಕ ವಿಷಯಗಳಿಗೆ ಸಂಬಂಧಿಸಿದಂತೆ 'ಮೌನ್ ಕಿ ಬಾತ್' ಆಗಿದೆ ಎಂದು ಟಾಂಗ್ ನೀಡಿದ್ದಾರೆ.