ಏಕರೂಪ ನಾಗರಿಕ ಸಂಹಿತೆಯ ಸಮಿತಿಯ ಅಧಿಕಾರಾವಧಿಯನ್ನು ವಿಸ್ತರಿಸಲು ನಿರ್ಧರಿಸಿದ ಉತ್ತರಾಖಂಡ!

ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಪ್ರಾರಂಭಿಸುವ ಬಗ್ಗೆ ಪರಿಶೀಲಿಸಲು ರಚಿಸಲಾದ ತಜ್ಞರ ಸಮಿತಿಯ ಅಧಿಕಾರಾವಧಿಯನ್ನು ವಿಸ್ತರಿಸಲಿದ್ದು ಸಮಿತಿಯ ಅವಧಿ ಮೇ 27ಕ್ಕೆ ಕೊನೆಗೊಳ್ಳಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಪ್ರಾರಂಭಿಸುವ ಬಗ್ಗೆ ಪರಿಶೀಲಿಸಲು ರಚಿಸಲಾದ ತಜ್ಞರ ಸಮಿತಿಯ ಅಧಿಕಾರಾವಧಿಯನ್ನು ವಿಸ್ತರಿಸಲಿದ್ದು ಸಮಿತಿಯ ಅವಧಿ ಮೇ 27ಕ್ಕೆ ಕೊನೆಗೊಳ್ಳಲಿದೆ.

ಕರಡು ಅಂತಿಮಗೊಳಿಸಲು ಸಮಿತಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ವಿಸ್ತರಣೆಗೆ ಬೇಡಿಕೆ ಉದ್ಭವಿಸಿದೆ ಎಂದು ಸಮಿತಿಯ ಹಿರಿಯ ಸದಸ್ಯ ಶತ್ರುಘ್ನ ಸಿಂಗ್ ಹೇಳಿದ್ದಾರೆ.

ಮದುವೆ, ವಿಚ್ಛೇದನ, ಆಸ್ತಿ ಹಕ್ಕುಗಳು, ಉತ್ತರಾಧಿಕಾರ, ದತ್ತು, ನಿರ್ವಹಣೆ, ನಾಗರಿಕ ಹಕ್ಕುಗಳು ಮತ್ತು ಇತರ ಹಲವು ವಿಷಯಗಳ ಕುರಿತು ಕೋಡ್ ಅನ್ನು ರಚಿಸಬೇಕಾಗಿದೆ ಎಂದು ಶತ್ರುಘ್ನ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಸಮಿತಿಯು ಇದುವರೆಗೆ 1.25 ಲಕ್ಷ ಸಲಹೆಗಳನ್ನು ಸ್ವೀಕರಿಸಿದ್ದು ಸಮಿತಿಯು ಸದ್ಯ ಅವುಗಳನ್ನು ಪರಿಶೀಲಿಸಲು ಮತ್ತು ಅಧ್ಯಯನ ಮಾಡಲು ಪ್ರಾರಂಭಿಸಿದೆ. ಸಮಿತಿಯ ಸದಸ್ಯರ ಪ್ರಕಾರ, ಯುಸಿಸಿ ಕರಡು ರಚನೆಯ ಶೇಕಡಾ 75ರಷ್ಟು ಕೆಲಸ ಮುಗಿದಿದೆ.

'ಸ್ವೀಕರಿಸಿದ ಸಲಹೆಗಳನ್ನು ಅಧ್ಯಯನ ಮಾಡಿದ ನಂತರ, ಸಮಿತಿಯು ಅದನ್ನು ಕರಡು ರೂಪದಲ್ಲಿ ಸರ್ಕಾರಕ್ಕೆ ರವಾನಿಸುತ್ತದೆ. ಅದರ ಒಪ್ಪಿಗೆಯ ನಂತರ ಸರ್ಕಾರವು ಅದನ್ನು ಕಾನೂನು ಇಲಾಖೆಗೆ ಪರೀಕ್ಷೆಗೆ ಕಳುಹಿಸುತ್ತದೆ ಎಂದು ಶತ್ರುಘ್ನ ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com