ಆಯುಷ್ ಚಿಕಿತ್ಸೆಗಾಗಿ ಹೊಸ ವೀಸಾ ಪರಿಚಯಿಸಿದ ಭಾರತ

ಆಯುಷ್ ಮತ್ತು ಇತರ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ಆಯುಷ್ ವೀಸಾ ಎಂಬ ಹೊಸ ವರ್ಗ ರಚಿಸಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಯುಷ್ ಮತ್ತು ಇತರ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ಆಯುಷ್ ವೀಸಾ ಎಂಬ ಹೊಸ ವರ್ಗ ರಚಿಸಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ.

ಆಯುಷ್ ಸಚಿವಾಲಯದ ಪ್ರಕಾರ, ಚಿಕಿತ್ಸೆ ಆರೈಕೆ, ಕ್ಷೇಮ ಮತ್ತು ಯೋಗದಂತಹ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡುವ ವಿದೇಶಿಯರಿಗಾಗಿ ವಿಶೇಷ ವೀಸಾ ಯೋಜನೆ ಪರಿಚಯಿಸಲಾಗಿದೆ.

ವಿದೇಶಿ ಪ್ರಜೆಗಳಿಗಾಗಿ ಆಯುಷ್ ವೀಸಾ ಎಂಬ ಹೊಸ ವರ್ಗ ರಚಿಸಿರುವುದು ಒಂದ ಮಹತ್ವದ ಹೆಜ್ಜೆಯಾಗಿದೆ ಎಂದು ಆಯುಷ್, ಬಂದರು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಹೇಳಿದ್ದಾರೆ.

ಇದು ಭಾರತದಲ್ಲಿ ವೈದ್ಯಕೀಯ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಉಪಕ್ರಮವು ಭಾರತೀಯ ಸಾಂಪ್ರದಾಯಿಕ ಔಷಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವನ್ನು ಬಲಪಡಿಸುತ್ತದೆ. ವಿಶೇಷ ಆಯುಷ್ ವೀಸಾ ಪರಿಚಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಆಯುಷ್ ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com