ನುಹ್ ಹಿಂಸಾಚಾರ: 202 ಜನರ ಬಂಧನ, 102 ಎಫ್‌ಐಆರ್ ದಾಖಲು

ನುಹ್‌ನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ ಮತ್ತು 80 ಜನರನ್ನು ವಶಕ್ಕೆ ಪಡೆಯಲಾಗಿ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಶುಕ್ರವಾರ ಹೇಳಿದ್ದಾರೆ.
ಹರಿಯಾಣದ ಬಿಜೆಪಿ ಸಚಿವ ಅನಿಲ್ ವಿಜ್
ಹರಿಯಾಣದ ಬಿಜೆಪಿ ಸಚಿವ ಅನಿಲ್ ವಿಜ್

ಚಂಡೀಗಢ: ನುಹ್‌ನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ ಮತ್ತು 80 ಜನರನ್ನು ವಶಕ್ಕೆ ಪಡೆಯಲಾಗಿ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಶುಕ್ರವಾರ ಹೇಳಿದ್ದಾರೆ.

ಗುಡ್ಡಗಳಿಂದ ಗುಂಡುಗಳನ್ನು ಹಾರಿಸಲಾಗಿದೆ ಮತ್ತು ಕಟ್ಟಡಗಳ ಮೇಲ್ಛಾವಣಿಯ ಮೇಲೆ ಕಲ್ಲುಗಳನ್ನು ಸಂಗ್ರಹಿಸಿದ್ದರು. ಇದು ನುಹ್ ಹಿಂಸಾಚಾರ ಪೂರ್ವ ಯೋಜಿತ ಎಂದು ಸೂಚಿಸುತ್ತದೆ ಎಂದು ವಿಜ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 102 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಹರಿಯಾಣ ಗೃಹ ಸಚಿವರು ಹೇಳಿದ್ದಾರೆ.

ಅಂಬಾಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜ್, "ಹಿಂಸಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದರು.

ಬಂಧಿತರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ. ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಲಾಠಿ ಇತ್ತು. ಇವುಗಳನ್ನು ಉಚಿತವಾಗಿ ವಿತರಿಸಲಾಗುತ್ತಿತ್ತೇ? ಇವುಗಳನ್ನು ಯಾರೋ ವ್ಯವಸ್ಥೆ ಮಾಡಿರಬೇಕು. ಗುಂಡುಗಳನ್ನು ಹಾರಿಸಲಾಗುತ್ತಿತ್ತು. ಆಯುಧಗಳು ಎಲ್ಲಿಂದ ಬಂದವು? ನಾವು ವಿಷಯದ ಬಗ್ಗೆ ಹೆಚ್ಚು ತನಿಖೆ ನಡೆಸುತ್ತೇವೆ ” ಎಂದು ವಿಜ್ ತಿಳಿಸಿದ್ದಾರೆ.

ಹಿಂಸಾಚಾರ ಪೂರ್ವ ಯೋಜಿತ ಮತ್ತು ಅದರ ಹಿಂದೆ ಮಾಸ್ಟರ್ ಮೈಂಡ್ ಇದ್ದಾರೆ ಎಂದು ಹರಿಯಾಣ ಗೃ ಸಚಿವರು ಮಂಗಳವಾರ ಹೇಳಿದ್ದರು.

ಆದಾಗ್ಯೂ, ಇಂದು ಪತ್ರಿಕಾಗೋಷ್ಠಿಯಲ್ಲಿ, ನುಹ್ ಪೊಲೀಸ್ ಅಧೀಕ್ಷಕ ನರೇಂದ್ರ ಸಿಂಗ್ ಬಿಜರ್ನಿಯಾ ಅವರು, ಹಿಂಸಾಚಾರದ ಹಿಂದೆ ಮಾಸ್ಟರ್‌ಮೈಂಡ್ ಇರುವ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com