ಇಂಡಿಯಾ ಒಕ್ಕೂಟದ ಕಾಂಗ್ರೆಸ್- ಟಿಎಂಸಿ ನಡುವೆ ಮತ್ತೆ ಬಿರುಕು!

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ದೂರ ಇಡುವ ನಿಟ್ಟಿನಲ್ಲಿ 'ಇಂಡಿಯಾ' ಒಕ್ಕೂಟ ರಚಿಸಿಕೊಂಡು ಪರಸ್ಪರ ಒಗಟ್ಟು ಪ್ರದರ್ಶಿಸುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್- ಟಿಎಂಸಿ ನಾಯಕರು ಆಗಾಗ್ಗೆ ಪರಸ್ಪರ ಆರೋಪ, ಟೀಕೆ ಸರ್ವೇ ಸಾಮಾನ್ಯವಾಗಿರುವಂತೆಯೇ ಇದೀಗ ಮತ್ತೆ ಬಿರುಕು ಕಾಣಿಸಿಕೊಂಡಿದೆ.
ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ
ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ದೂರ ಇಡುವ ನಿಟ್ಟಿನಲ್ಲಿ 'ಇಂಡಿಯಾ' ಒಕ್ಕೂಟ ರಚಿಸಿಕೊಂಡು ಪರಸ್ಪರ ಒಗಟ್ಟು ಪ್ರದರ್ಶಿಸುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್- ಟಿಎಂಸಿ ನಾಯಕರು ಆಗಾಗ್ಗೆ ಪರಸ್ಪರ ಆರೋಪ, ಟೀಕೆ ಸರ್ವೇ ಸಾಮಾನ್ಯವಾಗಿರುವಂತೆಯೇ ಇದೀಗ ಮತ್ತೆ ಬಿರುಕು ಕಾಣಿಸಿಕೊಂಡಿದೆ.

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷದ ವಿಜಯಶಾಲಿ ಅಭ್ಯರ್ಥಿಗಳಿಗೆ  ಪೊಲೀಸರು ಮತ್ತು ಗೂಂಡಾಗಳು ಬೆದರಿಕೆ ಹಾಕುತ್ತಿದ್ದು,ಆಡಳಿತಾರೂಢ ಟಿಎಂಸಿಗೆ ಸೇರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ. ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.  

ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಲ್ಲೆಲ್ಲಾ, ಪೊಲೀಸರು, ರಾಜಕೀಯ ಮುಖಂಡರು, ಗೂಂಡಾಗಳು ಕೊಲೆ ಮತ್ತು ಇತರ ಆರೋಪಗಳ ಮೂಲಕ ಬೆದರಿಕೆ ಹಾಕುತ್ತಿದ್ದು, ಟಿಎಂಸಿ ಸದಸ್ಯತ್ವವನ್ನು ಸ್ವೀಕರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದು ಮುಂದುವರೆದರೆ ಮುಂಬರುವ ದಿನಗಳಲ್ಲಿ ದೊಡ್ಡ ಆಯಾಮ ಪಡೆಯುವ ಸಾಧ್ಯತೆಯಿದ್ದು, ಇದು ರಾಷ್ಟ್ರದ ಮತ್ತು ಪಶ್ಚಿಮ ಬಂಗಾಳದ ಪ್ರಜಾಪ್ರಭುತ್ವದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಚೌಧರಿ ಬರೆದಿರುವ ಎರಡು ಪುಟುಗಳ ಪತ್ರದಲ್ಲಿ ತಿಳಿಸಿದ್ದಾರೆ.

ಟಿಎಂಸಿ ಅತಿಯಾದ ಅಧಿಕಾರದ ಆಸೆ ರಾಜ್ಯದಲ್ಲಿ ಏಕಪ್ರಭುತ್ವದ ಆಡಳಿತದ ಪರಿಕಲ್ಪನೆಯನ್ನು ರೂಪಿಸುವಲ್ಲಿ ಪ್ರಮುಖವಾಗಿದೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾಗಿರುವ ಚೌಧರಿ ಆರೋಪಿಸಿದ್ದು, "ದಶಕಕ್ಕೂ ಹೆಚ್ಚು ಕಾಲ  ಮುಖ್ಯಮಂತ್ರಿಯಾಗಿರುವ ನೀವು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಇದು ಸುಸಂಸ್ಕೃತ ಮಾರ್ಗವೇ!  ಎಂದು ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಪೊಲೀಸರು ಮತ್ತು ಗೂಂಡಾಗಳ ಮೂಲಕ  ಇತರ ಪಕ್ಷಗಳನ್ನು ಹಿಂಸಿಸುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದು, ಪಂಚಾಯತ್ ಬೋರ್ಡ್ ರಚನೆಗೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com