ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್

ಮಧ್ಯ ಪ್ರದೇಶದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರು ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಮಲ್ಖಾನ್ ಸಿಂಗ್
ಮಲ್ಖಾನ್ ಸಿಂಗ್

ಭೋಪಾಲ್: ಮಧ್ಯ ಪ್ರದೇಶದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರು ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಇಂದು ಭೋಪಾಲ್ ಕಾಂಗ್ರೆಸ್ ಕಚೇರಿಯಲ್ಲಿ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಅವರ ಸಮ್ಮುಖದಲ್ಲಿ ಮಲ್ಖಾನ್ ಸಿಂಗ್ ಅವರು ಕಾಂಗ್ರೆಸ್ ಸೇರಿದರು.

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಮಲ್ಖಾನ್ ಸಿಂಗ್, ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಬಿಜೆಪಿ ಪರ ಪ್ರಚಾರ ಮಾಡಿ, ತತ್ವ ಸಿದ್ದಾಂತದ ಪಕ್ಷ ಎಂದು ಭಾವಿಸಿದ್ದೆ. ಆದರೆ ಕಾಂಗ್ರೆಸ್ ಕಳೆದ 50 ವರ್ಷಗಳಲ್ಲಿ ಮಾಡದಷ್ಟು ಭ್ರಷ್ಟಾಚಾರವನ್ನು ಬಿಜೆಪಿ ಕೇವಲ 20 ವರ್ಷಗಳಲ್ಲಿ ಮಾಡಿದೆ ಎಂದು ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

"ನಾನು ರಾಜಕೀಯ ಮಾಡುವ ನಾಯಕನಲ್ಲ. ದೌರ್ಜನ್ಯದ ವಿರುದ್ಧದ ಹೋರಾಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಾರ್ವಜನಿಕರಿಗೆ ಅನ್ಯಾಯವಾದರೆ, ಅವರ ಮೇಲೆ ದಬ್ಬಾಳಿಕೆ ಕಂಡುಬಂದರೆ ನಾನು ಅದನ್ನು ವಿರೋಧಿಸುತ್ತೇನೆ" ಎಂದು ಸಿಂಗ್ ಹೇಳಿದರು.

ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರು 1982 ರಲ್ಲಿ ಅಂದಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಮುಂದೆ ಶರಣಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com