ನನ್ನ ತಂದೆ ಬಾಂಬ್ ಹಾಕಿರುವುದು ನಿಜ, ಆದರೆ...: ಬಿಜೆಪಿ ಟ್ವೀಟ್ ಗೆ ಸಚಿನ್ ಪೈಲಟ್ ಸ್ಪಷ್ಟನೆ
ಮಿಝೋರಾಂನಲ್ಲಿ 1966ರ ಮಾರ್ಚ್ ನಲ್ಲಿ ತನ್ನ ತಂದೆ ರಾಜೇಶ್ ಪೈಲಟ್ ವಾಯುಪಡೆಯ ಪೈಲಟ್ ಆಗಿ ಬಾಂಬ್ ಗಳನ್ನು ಹಾಕಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
Published: 16th August 2023 01:43 PM | Last Updated: 16th August 2023 01:57 PM | A+A A-

ಸಚಿನ್ ಪೈಲಟ್
ನವದೆಹಲಿ: ಮಿಝೋರಾಂನಲ್ಲಿ 1966ರ ಮಾರ್ಚ್ ನಲ್ಲಿ ತನ್ನ ತಂದೆ ರಾಜೇಶ್ ಪೈಲಟ್ ವಾಯುಪಡೆಯ ಪೈಲಟ್ ಆಗಿ ಬಾಂಬ್ ಗಳನ್ನು ಹಾಕಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
1966ರಲ್ಲಿ ರಾಜೇಶ್ ಪೈಲಟ್ ಮಿಜೊರಾಂ ರಾಜಧಾನಿ ಐಜ್ವಾಲ್ ಮೇಲೆ ಬಾಂಬ್ ಹಾಕಿದ್ದರು ಎಂಬ ಬಿಜೆಪಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ನನ್ನ ತಂದೆ ವಿಚಾರವಾಗಿ ನೀವು ತಪ್ಪು ಮಾಹಿತಿ ಹಂಚಿಕೊಂಡಿದ್ದೀರಿ ಎಂದು ಹೇಳಿದ್ದಾರೆ.
ಮಾರ್ಚ್ 5, 1966ರಂದು ಮಿಜೊರಾಂನ ರಾಜಧಾನಿ ಐಜ್ವಾಲ್‌ನಲ್ಲಿ ವಾಯುಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ರಾಜೇಶ್ ಪೈಲಟ್ ಮತ್ತು ಸುರೇಶ್ ಕಲ್ಮಾಡಿ ಅವರ ಪಾತ್ರವೂ ಇದೆ. ಅಂದು ವಾಯುಪಡೆಯ ವಿಮಾನವನ್ನು ಅವರಿಬ್ಬರು ನಡೆಸುತ್ತಿದ್ದರು. ಇದಾದ ಬಳಿಕ ಇಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿತ್ತು. ತಮ್ಮದೇ ಜನರ ಮೇಲೆ ದಾಳಿ ನಡೆಸಿದವರಿಗೆ ಇಂದಿರಾ ಗಾಂಧಿ ಅವರು ಹೇಗೆ ಗೌರವ ನೀಡಿದರು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆ’ ಎಂದು ಅಮಿತ್ ಮಾಳವೀಯ ಟ್ವಿಟರ್‌ನಲ್ಲಿ(ಎಕ್ಸ್) ಆರೋಪಿಸಿದ್ದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಪ್ರಧಾನಿ ನರೇಂದ್ರ ಮೋದಿ ಮೌನ ಪ್ರಶ್ನಿಸಿದ ಸಚಿನ್ ಪೈಲಟ್
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿನ್ ಪೈಲಟ್, ‘ನನ್ನ ತಂದೆ ಬಾಂಬ್ ಹಾಕಿರುವುದು ಹೌದು. ಆದರೆ ಅದು ಮಿಜೊರಾಂ ಮೇಲಲ್ಲ’ ಎಂದಿದ್ದಾರೆ. ನನ್ನ ತಂದೆ ವಾಯುಪಡೆಗೆ ಸೇರಿಕೊಂಡಿದ್ದು 29 ಅಕ್ಟೋಬರ್ 1966(ಪ್ರಮಾಣ ಪತ್ರ ಲಗತ್ತಿಸಿದ್ದೇನೆ).
ಮಿಜೊರಾಂನ ದಾಳಿ (ಮಾರ್ಚ್ 5, 1966) ಸಂದರ್ಭ ನನ್ನ ತಂದೆ ವಾಯುಪಡೆಯಲ್ಲಿಯೇ ಇರಲಿಲ್ಲ. ಹೌದು ನನ್ನ ತಂದೆ ಬಾಂಬ್ ದಾಳಿ ನಡೆಸಿದ್ದಾರೆ. ಅದು ಪೂರ್ವ ಪಾಕಿಸ್ತಾನದ ಮೇಲೆ. 1971ರ ಇಂಡೋ–ಪಾಕಿಸ್ತಾನದ ಯುದ್ಧದ ಸಂದರ್ಭ. ನೀವು ತಪ್ಪು ಮಾಹಿತಿ ಹಂಚಿಕೊಂಡಿದ್ದೀರಿ. ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಪೈಲಟ್ ಹಂಚಿಕೊಂಡಿರುವ ಪ್ರಮಾಣಪತ್ರದ ಪ್ರಕಾರ ಅಕ್ಟೋಬರ್ 29, 1966ರಲ್ಲಿ ಭಾರತೀಯ ವಾಯುಪಡೆಗೆ ರಾಜೇಶ್ ಪೈಲಟ್ ಅವರನ್ನು ನಿಯೋಜಿಸಲಾಗಿತ್ತು.
.@amitmalviya - You have the wrong dates, wrong facts…
— Sachin Pilot (@SachinPilot) August 15, 2023
Yes, as an Indian Air Force pilot, my late father did drop bombs. But that was on erstwhile East Pakistan during the 1971 Indo-Pak war and not as you claim, on Mizoram on the 5th of March 1966.
He was commissioned into the… https://t.co/JfexDbczfk pic.twitter.com/Lpe1GL1NLB