ಚಂದ್ರಯಾನ-3 ಆಗಸ್ಟ್ 23ರಂದು ಲ್ಯಾಂಡಿಂಗ್ ಆಗದಿದ್ದರೆ ಮತ್ತೆ ಆಗಸ್ಟ್ 27ರಂದು ಪ್ರಯತ್ನಿಸುತ್ತೇವೆ: ಇಸ್ರೋ ವಿಜ್ಞಾನಿ

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೇವಲ 25 ರಿಂದ 150 ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿದೆ. ಆಗಸ್ಟ್ 23ರಂದು ಭಾರತವು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್‌ ಮಾಡಲು ಸಿದ್ಧರಿದ್ದೇವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೇವಲ 25 ರಿಂದ 150 ಕಿಲೋಮೀಟರ್ ದೂರದಲ್ಲಿ ಸುತ್ತುತ್ತಿದೆ. ಆಗಸ್ಟ್ 23ರಂದು ಭಾರತವು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್‌ ಮಾಡಲು ಸಿದ್ಧರಿದ್ದೇವೆ. ಒಂದು ಅಂದು ಸಾಧ್ಯವಾಗದೆ ಇದ್ದರೆ ಆಗಸ್ಟ್ 27ರಂದು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡಿಂಗ್ ಮಾಡಿದರೆ ಭಾರತ ಇತಿಹಾಸವನ್ನು ಸೃಷ್ಟಿಸುತ್ತದೆ. ಹಾಗೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಯಶಸ್ವಿಯಾಗಿದ್ದವು. ಅಷ್ಟೇ ಅಲ್ಲ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಭಾರತ ಆಗಲಿದೆ.

ಲ್ಯಾಂಡಿಂಗ್ ಎರಡು ಗಂಟೆಗಳ ಮೊದಲು ಮಾಡ್ಯೂಲ್‌ನ ಸ್ಥಿತಿ ಪರಿಶೀಲನ: ನೀಲೇಶ್ ಎಂ. ದೇಸಾಯಿ
ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ನಾವು ಲ್ಯಾಂಡರ್ ಮಾಡ್ಯೂಲ್ ಮತ್ತು ವಾತಾವರಣದ ಆಧಾರದ ಮೇಲೆ ನಿರ್ಧರಿಸುತ್ತೇವೆ ಎಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಇಸ್ರೋ) ನಿರ್ದೇಶಕ ನಿಲೇಶ್ ಎಂ. ದೇಸಾಯಿ ತಿಳಿಸಿದ್ದಾರೆ. ಆ ಸಮಯದಲ್ಲಿ ಚಂದ್ರನ ಮೇಲೆ ಅದನ್ನು ಲ್ಯಾಂಡ್ ಮಾಡುವುದು ಸೂಕ್ತವೇ ಅಥವಾ ಬೇಡವೇ? ಎಂಬುದನ್ನು ನಿರ್ಧರಿಸುತ್ತೇವೆ ಎಂದರು.

ಆಗಸ್ಟ್ 23ರಂದು ಯಾವುದೂ ಅನುಕೂಲಕರವಾಗಿಲ್ಲದಿದ್ದರೆ, ಆಗಸ್ಟ್ 27ರಂದು ನಾವು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ. ಯಾವುದೇ ಸಮಸ್ಯೆ ಇಲ್ಲದಿದ್ದರೆ, ಆಗಸ್ಟ್ 23ರಂದು ನಾವು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸಲು ಸಾಧ್ಯವಾಗುತ್ತದೆ.

ಎಲ್ಲಾ ವ್ಯವಸ್ಥೆಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ: ಇಸ್ರೋ ಅಧ್ಯಕ್ಷ
ಇಸ್ರೋ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎಸ್ ಸೋಮನಾಥ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, 'ಚಂದ್ರಯಾನ-3' ನ ಸ್ಥಿತಿ ಮತ್ತು ಸಿದ್ಧತೆಗಳ ಬಗ್ಗೆ ತಿಳಿಸಿದರು. ಇಸ್ರೋ ಅಧ್ಯಕ್ಷರು ಚಂದ್ರಯಾನ-3 ರ ಆರೋಗ್ಯ ಸ್ಥಿತಿಯ ಬಗ್ಗೆ ಸಚಿವರಿಗೆ ವಿವರಿಸಿದರು. ಎಲ್ಲಾ ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಬುಧವಾರ ಯಾವುದೇ ಆಕಸ್ಮಿಕವನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com