ಇತಿಹಾಸ ಸೃಷ್ಟಿಸಿದ ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶ ಭಾರತ

ಭಾರತದ ಮೂರನೇ ಚಂದ್ರಯಾನ-3 ಭಾರತೀಯ ಕಾಲಮಾನ ನಿನ್ನೆ ಆಗಸ್ಟ್ 23 ರ ಬುಧವಾರ ಸಂಜೆ 6.04 ಕ್ಕೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಈ ಐತಿಹಾಸಿಕ ಸಾಧನೆಯೊಂದಿಗೆ, ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಪಾತ್ರವಾಗ
ಚಂದ್ರಯಾನ ಬಗ್ಗೆ ಇಸ್ರೊ ಹಂಚಿಕೊಂಡ ಚಿತ್ರ
ಚಂದ್ರಯಾನ ಬಗ್ಗೆ ಇಸ್ರೊ ಹಂಚಿಕೊಂಡ ಚಿತ್ರ

ಬೆಂಗಳೂರು/ನವದೆಹಲಿ: ಭಾರತದ ಮೂರನೇ ಚಂದ್ರಯಾನ-3 ಭಾರತೀಯ ಕಾಲಮಾನ ನಿನ್ನೆ ಆಗಸ್ಟ್ 23 ರ ಬುಧವಾರ ಸಂಜೆ 6.04 ಕ್ಕೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಈ ಐತಿಹಾಸಿಕ ಸಾಧನೆಯೊಂದಿಗೆ, ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಪಾತ್ರವಾಗಿ ಇತಿಹಾಸ ನಿರ್ಮಿಸಿದೆ.

ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಚಂದ್ರನ ಮೇಲೆ ನೌಕೆಯನ್ನು ಇಳಿಸಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. ಭಾರತಕ್ಕಿಂತಲೂ ಹಿಂದಿನಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮತ್ತು ಮಹತ್ತರ ಸಂಶೋಧನೆಗಳನ್ನು ನಡೆಸಿರುವ ಮುಂದುವರಿದ ದೇಶಗಳಿಗೆ ಕೂಡ ಇದು ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಚಂದ್ರಯಾನ-3 ಇತಿಹಾಸ ಸೃಷ್ಟಿ: ಚಂದ್ರಯಾನ-3 ರ ಪ್ರಯಾಣವು ಜುಲೈ 14 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಬಾಹ್ಯಾಕಾಶ ನೌಕೆಯು ಚಿಮ್ಮಿತು. ಇದರ ನಂತರ, ಕೆಲವು ಕಕ್ಷೆಯನ್ನು ಹೆಚ್ಚಿಸುವ ಕುಶಲತೆಗಳನ್ನು ಮಾಡಿ, ಅಂತಿಮವಾಗಿ ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಅದರ ಅಳವಡಿಕೆಗೆ ಕಾರಣವಾಯಿತು. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಮೇಲೆ ಇಳಿಯುವ ಮೊದಲು ಬಾಹ್ಯಾಕಾಶ ನೌಕೆಯು ತನ್ನ ಮತ್ತು ಚಂದ್ರನ ಮೇಲ್ಮೈ ನಡುವಿನ ಅಂತರವನ್ನು ಸಂಕುಚಿತಗೊಳಿಸಿತು.

ಬಾಹ್ಯಾಕಾಶ ನೌಕೆಯು ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನ್ನು ಹೊಂದಿದ್ದು, ಅದು ಹೆಪ್ಪುಗಟ್ಟಿದ ನೀರಿನ ಪುರಾವೆಗಳನ್ನು ಕಂಡುಹಿಡಿಯಲು ಮತ್ತು ಚಂದ್ರನ ಅನ್ವೇಷಿಸದ ಧ್ರುವ ಪ್ರದೇಶದ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದು ಅಭಿವೃದ್ಧಿಪಡಿಸಲು ಚಂದ್ರನ ಮೇಲೆ ಪ್ರಯೋಗಗಳನ್ನು ಮಾಡುತ್ತದೆ. ರೋವರ್ ಮತ್ತು ಲ್ಯಾಂಡರ್ ತಮ್ಮ ಮೌಲ್ಯಮಾಪನಗಳನ್ನು ಮಾಡಲು ಚಂದ್ರನ ಮೇಲೆ 14 ದಿನಗಳ ಕಾಲ ಇರುತ್ತವೆ. ದಕ್ಷಿಣ ಧ್ರುವವು ವಿಜ್ಞಾನಿಗಳಿಗೆ ಆಸಕ್ತಿಯ ಪ್ರದೇಶವಾಗಿದೆ.

ಚಂದ್ರಯಾನ-1 "ಟೈಡಲ್ ಲಾಕಿಂಗ್" ಎಂಬ ವಿದ್ಯಮಾನದಿಂದಾಗಿ ಭೂಮಿಯಿಂದ ನೋಡಲಾಗದ ಚಂದ್ರನ ದೂರದ ಭಾಗದಲ್ಲಿ ಹೆಪ್ಪುಗಟ್ಟಿದ ನೀರಿನ ಪುರಾವೆಗಳನ್ನು ಕಂಡುಹಿಡಿದಿದೆ. ಪ್ರಾಚೀನ ನೀರಿನ ಮಂಜುಗಡ್ಡೆಯು ಚಂದ್ರನ ಜ್ವಾಲಾಮುಖಿಗಳ ದಾಖಲೆಯನ್ನು ಒದಗಿಸುತ್ತದೆ. ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ಭೂಮಿಗೆ ತಂದ ವಸ್ತುಗಳ ಬಗ್ಗೆ ಸಾಗರಗಳು ಹೇಗೆ ರೂಪುಗೊಂಡವು ಎಂಬುದರ ಬಗ್ಗೆ ಬೆಳಕು ಚೆಲ್ಲಲು ಇದು ಸಹಾಯ ಮಾಡುತ್ತದೆ. ಚಂದ್ರನ ದಕ್ಷಿಣ ಧ್ರುವದಿಂದ ಈ ಮಂಜುಗಡ್ಡೆಯನ್ನು ಚಂದ್ರನಲ್ಲಿ ಭವಿಷ್ಯದ ಕಾರ್ಯಾಚರಣೆಗಳಿಗಾಗಿ ನೀರು, ಆಮ್ಲಜನಕ ಮತ್ತು ಇಂಧನವನ್ನು ಹೊರತೆಗೆಯಲು ಬಳಸಬಹುದು.

ಚಂದ್ರಯಾನ-3 ರ ಪ್ರಾಥಮಿಕ ಉದ್ದೇಶಗಳು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುವುದು, ಚಂದ್ರನ ಮೇಲೆ ರೋವರ್ ರೋವಿಂಗ್ ನ್ನು ಪ್ರದರ್ಶಿಸುವುದು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com