ಎನ್‌ಸಿಪಿಯಲ್ಲಿ ಅಜಿತ್‌ಗೆ ಬಾಗಿಲು ಮುಚ್ಚುವ ಸುಳಿವು ನೀಡಿದ ಶರದ್ ಪವಾರ್, ಊಹಾಪೋಹಗಳಿಗೆ ಕಿಡಿ

ಅಜಿತ್ ಪವಾರ್ ಅವರನ್ನು ಎನ್‌ಸಿಪಿ ನಾಯಕ ಎಂದು ಎಂದಿಗೂ ಹೇಳಿಲ್ಲ ಮತ್ತು ಪಕ್ಷ ವಿಭಜನೆಯಾಗಿದೆ ಎಂದು ಶರದ್ ಪವಾರ್ ಉಲ್ಟಾ ಹೊಡೆಯುವ ಮೂಲಕ ಅಜಿತ್ ಪವಾರ್‌ಗೆ ಪಕ್ಷದಲ್ಲಿ ಬಾಗಿಲು ಮುಚ್ಚುವ ಸೂಚನೆ ನೀಡಿದ್ದಾರೆ. 
ಅಜಿತ್, ಶರದ್  ಪವಾರ್ ಸಾಂದರ್ಭಿಕ ಚಿತ್ರ
ಅಜಿತ್, ಶರದ್ ಪವಾರ್ ಸಾಂದರ್ಭಿಕ ಚಿತ್ರ

ಮುಂಬೈ: ಅಜಿತ್ ಪವಾರ್ ಅವರನ್ನು ಎನ್‌ಸಿಪಿ ನಾಯಕ ಎಂದು ಎಂದಿಗೂ ಹೇಳಿಲ್ಲ ಮತ್ತು ಪಕ್ಷ ವಿಭಜನೆಯಾಗಿದೆ ಎಂದು ಶರದ್ ಪವಾರ್ ಉಲ್ಟಾ ಹೊಡೆಯುವ ಮೂಲಕ ಅಜಿತ್ ಪವಾರ್‌ಗೆ ಪಕ್ಷದಲ್ಲಿ ಬಾಗಿಲು ಮುಚ್ಚುವ ಸೂಚನೆ ನೀಡಿದ್ದಾರೆ. 

ಮಹಾರಾಷ್ಟ್ರದ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಬಿಜೆಪಿ ಶರದ್ ಪವಾರ್ ಅವರ ಹೇಳಿಕೆಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿವೆ. ಶರದ್ ಪವಾರ್ ಶೀಘ್ರದಲ್ಲೇ ಎನ್‌ಡಿಎ ಸೇರಲಿದ್ದಾರೆ ಎಂದು ಆದ್ದರಿಂದ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದರೆ, ಹಿರಿಯ ರಾಜಕಾರಣಿ ಪವಾರ್ ಬಿಜೆಪಿಯನ್ನು ಗೊಂದಲಗೊಳಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ವಾದಿಸಿವೆ. 

ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಚಿಕ್ಕಪ್ಪನನ್ನು ಭೇಟಿಯಾದ ನಂತರ ಪಕ್ಷಕ್ಕೆ ಮರಳಲು ಬಯಸಬಹುದಿತ್ತು ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. ಅಜಿತ್ ಪವಾರ್ ಅವರ ಮನಸ್ಸನ್ನು ಬದಲಾಯಿಸುವಲ್ಲಿ ಶರದ್ ಪವಾರ್ ಯಶಸ್ವಿಯಾಗಿದ್ದಾರೆ. ಶರದ್ ಪವಾರ್ ಬಗ್ಗೆ ಕಾಂಗ್ರೆಸ್ ಮತ್ತು ಉದ್ಧವ್ ನೇತೃತ್ವದ ಶಿವಸೇನೆಯಲ್ಲಿ ಯಾವುದೇ ಗೊಂದಲವಿಲ್ಲ. ನಾವು ಶರದ್ ಪವಾರ್ ಅವರ ಬೆನ್ನಿಗೆ ದೃಢವಾಗಿ ನಿಲ್ಲುತ್ತೇವೆ. ಎನ್‌ಸಿಪಿಯಲ್ಲಿ ಏನು ನಡೆಯುತ್ತಿದೆ ಮತ್ತು ಅವರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. 

ಆದರೆ, ಶರದ್ ಪವಾರ್ ಅವರು ಅಭಿವೃದ್ಧಿ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದು, ಶೀಘ್ರದಲ್ಲೇ ಅವರು ಎನ್‌ಡಿಎ ಸೇರಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ, ಹಾಗಾಗಿ ಶರದ್ ಪವಾರ್ ಸೇರಿದಂತೆ ಎಲ್ಲರೂ ಅದರ ಭಾಗವಾಗಲು ಬಯಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಳೆ ಹೇಳಿದ್ದಾರೆ. 

ಶುಕ್ರವಾರ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ಅಜಿತ್ ಅವರನ್ನು ಪಕ್ಷದ ನಾಯಕರಾಗಿದ್ದು, ತಮ್ಮ ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದು ಹೇಳಿದ್ದರು. ನಂತರ ಅವರು ಉಲ್ಟಾ ಹೊಡೆದಿದ್ದು, ನಾನು ಆ ರೀತಿಯಲ್ಲಿ ಹೇಳಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com